ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಅಧಿಕಾರಿಗಳ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಬಹಿರಂಗ

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪದಲ್ಲಿ 11 ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಬುಧವಾರ ನಡೆದ ದಾಳಿ ಸಂದರ್ಭದಲ್ಲಿ ಪತ್ತೆ ಮಾಡಿದ ಆಸ್ತಿ-ಪಾಸ್ತಿಗಳ ಮಾಹಿತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಬಹಿರಂಗಪಡಿಸಿದೆ.

* ಶೆಕ್ಷಾವಲಿ, ಆಯುಕ್ತರು, ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಬಳ್ಳಾರಿ

ಬಳ್ಳಾರಿಯ ವಿವಿಧ ಸ್ಥಳಗಳಲ್ಲಿ 3 ಮನೆ, 5 ನಿವೇಶನ, ಒಂದು ಕೈಗಾರಿಕಾ ಶೆಡ್‌, ಒಂದು ನಿರ್ಮಾಣ ಹಂತದ ಮನೆ, 3.13 ಎಕರೆ ಜಮೀನು, 1 ಕಾರು, ₹ 10 ಲಕ್ಷ ಮೌಲ್ಯದ ಗೃಹಬಳಕೆ ವಸ್ತುಗಳು, ₹ 58 ಸಾವಿರ ನಗದು

* ಎಚ್‌.ಬಿ. ಮಲ್ಲಪ್ಪ, ಕಾರ್ಯಪಾಲಕ ಎಂಜಿನಿಯರ್‌, ಸಣ್ಣ ನೀರಾವರಿ, ಕಲಬುರ್ಗಿ

4 ವಾಸದ ಮನೆಗಳು, ಒಂದು ಖಾಲಿ ನಿವೇಶನ, ಒಂದು ಫಾರ್ಮಹೌಸ್‌, 31 ಎಕರೆ ಜಮೀನು, 3 ಕಾರು, 1 ಟ್ರ್ಯಾಕ್ಟರ್ & 4 ಮೋಟಾರ್ ಬೈಕ್, 1 ಕೆ.ಜಿ 300 ಗ್ರಾಂ ಚಿನ್ನ, 6 ಕೆ.ಜಿ. ಬೆಳ್ಳಿ. ₹ 5 ಲಕ್ಷ ಮೌಲ್ಯದ ಗೃಹ ಬಳಕೆ ವಸ್ತುಗಳು, ₹ 23 ಲಕ್ಷ ನಗದು

* ಪಿ.ಎಫ್. ಮಿರಾಂಡಾ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಬಂಟ್ವಾಳ

ವಿವಿಧ ಸ್ಥಳಗಳಲ್ಲಿ 7 ನಿವೇಶನಗಳು, 12 ಎಕರೆ ಜಮೀನು, ಒಂದು ಅಪಾರ್ಟ್‌ಮೆಂಟ್‌, ಎರಡು ಕಾರು, ಒಂದು ಮೋಟಾರ್ ಬೈಕ್, ಬ್ಯಾಂಕ್ ಠೇವಣಿ ಮತ್ತು ಎಲ್‍ಐಸಿಗಳಲ್ಲಿ ಅಂದಾಜು ₹ 15 ಲಕ್ಷ, 250 ಗ್ರಾಂ ಚಿನ್ನ, 1 ಕೆ.ಜಿ. ಬೆಳ್ಳಿ , ನಗದು ₹ 5 ಲಕ್ಷ, ಬ್ಯಾಂಕು ಖಾತೆಗಳಲ್ಲಿ ಸುಮಾರು ₹ 56 ಲಕ್ಷ, ಫಾರ್ಮ್‌ಹೌಸ್‌ ನವೀಕರಣಕ್ಕೆ ₹ 20 ಲಕ್ಷ ವೆಚ್ಚ ಮಾಡಿರುವುದು ಪತ್ತೆ

* ಜಿ.ಸಿ. ಜಗದೀಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಕೊರಟಗೆರೆ

ವಿವಿಧ ಸ್ಥಳಗಳಲ್ಲಿ 12 ನಿವೇಶನ, ₹ 50 ಲಕ್ಷದ ಮನೆ, 2 ಎಕರೆ ಜಮೀನು,  450 ಗ್ರಾಂ ಚಿನ್ನ, ಬೆಳ್ಳಿ 115 ಗ್ರಾಂ, ₹ 6.50 ಲಕ್ಷ ಮೌಲ್ಯದ ಗೃಹಬಳಕೆ ವಸ್ತುಗಳು, ಒಂದು ಕಾರು, 3 ದ್ವಿಚಕ್ರ ವಾಹನ, ನಗದು ₹ 1.38 ಲಕ್ಷ

* ಡಿ. ಹೇಮಂತ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಸಣ್ಣ ನೀರಾವರಿ, ಚಿಕ್ಕಬಳ್ಳಾಪುರ

1 ವಾಸದ ಮನೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 4 ನಿವೇಶನ, ನೆಲಮಂಗಲದಲ್ಲಿ 7 ನಿವೇಶನ, ನೆಲಮಂಗಲ ತಾಲ್ಲೂಕಿನಲ್ಲಿ 2 ಎಕರೆ ಜಮೀನು, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 75 ಎಕರೆ ಜಮೀನು, 2 ಕಾರು, ಒಂದು ಮೋಟಾರ್‌ ಬೈಕ್‌,  680 ಗ್ರಾಂ ಚಿನ್ನ , 3 ಕೆ.ಜಿ ಬೆಳ್ಳಿ, ನಗದು ₹ 2.49 ಲಕ್ಷ

* ಎಸ್.ಎಂ. ವಾಸಣ್ಣ, ಜಂಟಿ ನಿರ್ದೇಶಕ, ಫ್ಯಾಕ್ಟರಿ ಅಂಡ್ ಬಾಯ್ಲರ್ಸ್‌, ಕಾರ್ಮಿಕ ಭವನ, ಬೆಂಗಳೂರು

ಮೈಸೂರು, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ 3 ವಾಸದ ಮನೆಗಳು, ಕಡೂರು ಮತ್ತು ಆನೇಕಲ್ ತಾಲ್ಲೂಕಿನಲ್ಲಿ 3 ನಿವೇಶನ ಹಾಗೂ ತರೀಕೆರೆ ತಾಲ್ಲೂಕಿನಲ್ಲಿ 2 ಎಕರೆ 23 ಗುಂಟೆ ಜಮೀನು, 1 ಕಾರು ಮತ್ತು 2 ಮೋಟಾರ್ ಬೈಕ್, ಬ್ಯಾಂಕ್ ಠೇವಣಿ ಹಾಗೂ ಎಲ್‍ಐಸಿಗಳಲ್ಲಿ ₹ 15 ಲಕ್ಷ, ಚಿನ್ನ 400 ಗ್ರಾಂ, ಬೆಳ್ಳಿ 3.5 ಕೆ.ಜಿ, ಅಂದಾಜು ₹ 13
ಲಕ್ಷ ಮೌಲ್ಯದ ಗೃಹಬಳಕೆ ವಸ್ತು, ನಗದು ₹ 7 ಲಕ್ಷ

* ಎಂ.ಸಿ. ಶಶಿಕುಮಾರ್, ಜಂಟಿ ನಿರ್ದೇಶಕ, ಯೋಜನಾ ವಿಭಾಗ, ಬೆಂಗಳೂರು

ಮೈಸೂರಿನಲ್ಲಿ 1 ವಾಸದ ಮನೆ ಹಾಗೂ ಕೃಷಿ ಜಮೀನು, 1 ಕಾರು, 1 ಮೋಟಾರ್ ಬೈಕ್, ಬ್ಯಾಂಕ್ ಠೇವಣಿ ಸುಮಾರು ₹ 60 ಲಕ್ಷ, 1.5 ಕೆ.ಜಿ ಚಿನ್ನ , 6 ಕೆ.ಜಿ. ಬೆಳ್ಳಿ, ಬ್ಯಾಂಕ್‌ ಠೇವಣಿ ಸುಮಾರು ₹ 50 ಲಕ್ಷ, ನಗದು ₹ 2.96 ಲಕ್ಷ

* ಜೆ.ವಿ. ತ್ಯಾಗರಾಜ್, ಸಹಾಯಕ ಎಂಜಿನಿಯರ್, ಬಿಬಿಎಂಪಿ

ಶಿವಮೊಗ್ಗದ ವಿವಿಧ ಸ್ಥಳಗಳಲ್ಲಿ 4 ಮನೆಗಳು, ಚಿಕ್ಕಮಗಳೂರಿನಲ್ಲಿ 1 ಮನೆ ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 8 ಎಕರೆ ಜಮೀನು, 2 ಕಾರು, 3 ಮೋಟಾರ್ ಬೈಕ್, 400 ಗ್ರಾಂ ಚಿನ್ನ, 800 ಗ್ರಾಂ ಬೆಳ್ಳಿ, ₹ 1.66 ಲಕ್ಷ ನಗದು

* ಚಂದ್ರಹಾಸ, ಕಾರ್ಯಪಾಲಕ ಎಂಜಿನಿಯರ್, ಜಿಲ್ಲಾ ಪಂಚಾಯಿತಿ, ಮಂಡ್ಯ

ಮಂಡ್ಯದ ವಿವಿಧ ಸ್ಥಳಗಳಲ್ಲಿ 2 ಮನೆಗಳು, ಕುದುರೆಗುಂಡಿ ಗ್ರಾಮದಲ್ಲಿ 1 ಮನೆ ಮತ್ತು ಹೀತಗಾನಹಳ್ಳಿ ತಾಲ್ಲೂಕಿನಲ್ಲಿ 2 ಗುಂಟೆ ನಿವೇಶನ, ಹುಣಸೂರು ತಾಲ್ಲೂಕಿನಲ್ಲಿ 1 ನಿವೇಶನ, ಬಳ್ಳಾರಿ ಟೌನ್‍ನಲ್ಲಿ 2.75 ಸೆಂಟ್ ನಿವೇಶನ ಹಾಗೂ ಕುದುರೆಗುಂಡಿ ಗ್ರಾಮದಲ್ಲಿ ತೆಂಗಿನ ತೋಟ, ಗೆಜ್ಜಲಗೆರೆ ಗ್ರಾಮದಲ್ಲಿ 18 ಗುಂಟೆ ಜಮೀನು ಹಾಗೂ 1 ಕಾರು, 2 ಮೋಟಾರ್ ಬೈಕ್, ಚಿನ್ನ 500 ಗ್ರಾಂ, ಬೆಳ್ಳಿ 1.7 ಕೆ.ಜಿ, ವಿವಿಧ ಬ್ಯಾಂಕ್ ಖಾತೆಗಳಲ್ಲಿ ₹ 8.5 ಲಕ್ಷ ಹಾಗೂ ₹ 83,500 ನಗದು.

* ಪಾಂಡುರಂಗ ಕೆ. ಪೈ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಅಂಕೋಲಾ

ಧಾರವಾಡದಲ್ಲಿ 1 ಮನೆ, ಬಿಜೂರು ಮತು ಧಾರವಾಡದಲ್ಲಿ 6.5 ಎಕರೆ ಕೃಷಿ ಜಮೀನು, 2 ಕಾರು ಮತ್ತು 2 ಮೋಟಾರ್ ಬೈಕ್, 826 ಗ್ರಾಂ ಚಿನ್ನ, ಒಂದು ಡೈಮೆಂಡ್ ನೆಕ್ಲೇಸ್ ಅಂದಾಜು ಬೆಲೆ ₹ 2.4 ಲಕ್ಷ, 5.58 ಕೆ.ಜಿ ಬೆಳ್ಳಿ ಹಾಗೂ
₹ 14.22 ಲಕ್ಷ ಬ್ಯಾಂಕ್ ಠೇವಣಿ ರಶೀದಿ ಮತು ನಗದು ₹ 84,750.

* ಸುರೇಶ ಭೀಮಾ ನಾಯ್ಕ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಬೆಳಗಾವಿ

ಬೆಳಗಾವಿಯ ವಿವಿಧ ಸ್ಥಳಗಳಲ್ಲಿ 3 ಮನೆಗಳು, ಖಾನಾಪುರ ತಾಲ್ಲೂಕಿನ ಮುದೆಕೊಪ್ಪದಲ್ಲಿ 10 ಎಕರೆ ಪೌಲ್ಟ್ರಿ ಫಾರಂ, ಚಿಕ್ಕೋಡಿ ತಾಲ್ಲೂಕಿನ ಉಮ್ರಾಣಿ ಗ್ರಾಮದಲ್ಲಿ 15 ಎಕರೆ ಕೃಷಿ ಜಮೀನು ಎರಡು ಕಾರು ಮತ್ತು ಎರಡು ಮೋಟಾರ್ ಬೈಕ್ ಮತ್ತು 1 ಟ್ರ್ಯಾಕ್ಟರ್, 300 ಗ್ರಾಂ ಚಿನ್ನ, ನಗದು ₹ 48,000.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT