7

ಇಂದು ‘ಚಿಕ್ಕಬಳ್ಳಾಪುರ ಬಂದ್‌’

Published:
Updated:

ಚಿಕ್ಕಬಳ್ಳಾಪುರ: ಹೆಬ್ಬಾಳ ಮತ್ತು ನಾಗವಾರ ಕೆರೆಗಳ ತ್ಯಾಜ್ಯ ನೀರು ಸಂಸ್ಕರಿಸಿ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ವಿರೋಧಿಸಿ ಪ್ರಗತಿಪರ ಪರಿಸರ ಚಿಂತಕರ ವೇದಿಕೆ ಬುಧವಾರ ‘ಚಿಕ್ಕಬಳ್ಳಾಪುರ ಬಂದ್‌’ ಕರೆ ನೀಡಿದೆ.

ಶಾಶ್ವತ ನೀರಾವರಿ ಹೋರಾಟ ಸಮಿತಿ, ರೈತ ಸಂಘಗಳು, ಕನ್ನಡಪರ ಸಂಘಟನೆಗಳು, ಜೆಡಿಎಸ್, ಬಿಜೆಪಿ ಮತ್ತು ವಿವಿಧ ಸಂಘ ಸಂಸ್ಥೆಗಳು ಈ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಬಂದ್‌ ವಿರುದ್ಧ ಅಪಪ್ರಚಾರ: ವಿವಿಧ ಸಂಘಟನೆಗಳು ಬುಧವಾರ ಬಂದ್‌ಗೆ ಕರೆ ನೀಡಿದ್ದರು. ಆದರೆ ಕೆಲವರು ಬಂದ್‌  ನಡೆಯುವುದಿಲ್ಲ. ಯಾವ ವರ್ತಕರು ಅಂಗಡಿ ಬಾಗಿಲುಗಳನ್ನು ಮುಚ್ಚಬಾರದು ಎಂದು ಮಂಗಳವಾರ ರಾತ್ರಿ ಆಟೊ ಮೂಲಕ ನಗರದಲ್ಲಿ ಪ್ರಚಾರ ನಡೆಸಿದ್ದಾರೆ.

ಈ ಬಗ್ಗೆ ಬಂದ್‌ಗೆ ಕರೆ ನೀಡಿದ್ದ ಹೋರಾಟಗಾರರನ್ನು ವಿಚಾರಿಸಿದಾಗ, ‘ಇದು ಸುಳ್ಳು ವದಂತಿ, ನಾಳೆ ಬಂದ್‌ ನಡೆಯಲಿದೆ. ವರ್ತಕರು ಮತ್ತು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಈ ರೀತಿಯಾಗಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry