7

ಉದ್ಯೋಗಮೇಳಕ್ಕೆ ಸಚಿವೆ ಚಾಲನೆ

Published:
Updated:
ಉದ್ಯೋಗಮೇಳಕ್ಕೆ ಸಚಿವೆ ಚಾಲನೆ

ಕೊಳ್ಳೇಗಾಲ: ನಿರುದ್ಯೋಗಿಗಳಿಗೆ ಉದ್ಯೋಗಮೇಳದಲ್ಲಿ ಪ್ರತಿಭೆಗೆ ತಕ್ಕ ಉದ್ಯೋಗ ಸೀಗಲಿದೆ ಎಂದು ಜಿಲ್ಲಾ ಉಸ್ತುವರಿ ಸಚಿವೆ ಡಾ.ಎಂ.ಸಿ ಮೋಹನಕುಮಾರಿ ತಿಳಿಸಿದರು. ನಗರದ ಎಂ.ಜಿ.ಎಸ್.ವಿ ಕಾಲೇಜು ಆವರಣದಲ್ಲಿ ಶುಕ್ರವಾರ ಉದ್ಯೋಗ ಮತ್ತು ತರಬೇತಿ ಇಲಾಖೆ, ಜಿಲ್ಲಾ ವಿನಿಮಯ ಕೇಂದ್ರ ಹಾಗೂ ಎಸ್.ಜಯಣ್ಣ ಮತ್ತು ಆರ್‌. ಧ್ರುವನಾರಾಯಣ ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಉದ್ಯೋಗಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಮೇಳದಲ್ಲಿ ಐಟಿ, ಬಿಟಿ, ಸೆಕ್ಯೂರಿಟಿ ಸರ್ವೀಸ್ ಇತ್ಯಾದಿ ಸುಮಾರು 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಪ್ರತಿಯೊಬ್ಬರ ವಿದ್ಯಾಭ್ಯಾಸ ತಕ್ಕಂತೆ ಉದ್ಯೋಗ ದೊರಕಲಿದೆ. ಉದ್ಯೋಗ ಸಿಕ್ಕಿಲ್ಲವೆಂದು ನಿರಾಶರಾಗದೇ ಮತ್ತೊಮ್ಮೆ ಪ್ರಯತ್ನ ಮಾಡುವ ಮೂಲಕ ಉದ್ಯೋಗ ಪಡೆದುಕೊಳ್ಳಿ ಎಂದರು.

ಶಾಸಕ ಎಸ್.ಜಯಣ್ಣ ಮಾತನಾಡಿ, ಉದ್ಯೋಗ ಮೇಳದಲ್ಲಿ ಹಲವಾರು ಕೈಗಾರಿಕೆಗಳು, ಉದ್ಯೋಗ ನೀಡುವಂತಹ ಸಂಸ್ಥೆಗಳು ಬಂದಿವೆ. ಹತ್ತರಲ್ಲಿ ಒಬ್ಬರಿಗೆ ಕೆಲಸ ಸಿಕ್ಕರೆ ಈ ಮೇಳವು ಸಾರ್ಥಕವಾಗಲಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದು, ಸ್ವಂತ ಪ್ರಯತ್ನದ ಮೇಲೆ ಉದ್ಯೋಗ ಮಾಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷ ಎಂ.ರಾಮಚಂದ್ರ, ಉಪಾಧ್ಯಕ್ಷ ಜೆ.ಯೋಗೇಶ್, ಸದಸ್ಯ ಸದಾಶಿವಮೂರ್ತಿ, ಮಾಜಿ ಸದಸ್ಯ ಪುಟ್ಟಬುದ್ಧಿ, ತಾ.ಪಂ

ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಲತಾರಾಜಣ್ಣ, ನಗರಸಭೆ ಅಧ್ಯಕ್ಷ ಶಾಂತರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ, ಸದಸ್ಯ ಶಿವಾನಂದ, ಕಲೀಂಮುಲ್ಲಾ, ಪರಮೇಶ್ವರಯ್ಯ, ಚಾಮರಾಜನಗರ ತಾ.ಪಂ ಅಧ್ಯಕ್ಷ ಚಂದ್ರು, ತಹಶೀಲ್ದಾರ್ ಕಾಮಾಕ್ಷಮ್ಮ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉದ್ಯೋಗಾಧಿಕಾರಿ ಸಿ.ಎಂ.ಉಮಾ, ಸಂಯೋಜಕ ಡಾ.ವಿ.ಎನ್ ಮಹದೇವಯ್ಯ ವಡಗೆರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್‌ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry