7

ಕ್ರಿಸ್‌ಮಸ್‌: ಸಾಮೂಹಿಕ ಪ್ರಾರ್ಥನೆ

Published:
Updated:

ಮಾನ್ವಿ: ಪಟ್ಟಣದ ಕೋನಾಪುರ ಪೇಟೆ ಸೆಂಟ್‌ ಮೇರಿಸ್‌ ಚರ್ಚ್‌ ಮತ್ತು ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.

ಕ್ರಿಸ್‌ಮಸ್‌ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಜೀಸಸ್‌ ಜನನ ಕುರಿತು ಫಾದರ್‌ ಜೀವನ್‌ ಪ್ರಭು ಮಾಹಿತಿ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು, ಶಾಸಕ ಜಿ.ಹಂಪಯ್ಯ ನಾಯಕ, ಮಾಜಿ ಶಾಸಕ ಗಂಗಾಧರ ನಾಯ, ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಜಾ ವೆಂಕಟಪ್ಪ ನಾಯಕ, ಫಾದರ್‌ ಪೌಲ್‌ ಮೋರಸ್‌ ಮತ್ತು ಬಿಜೆಪಿ ಮುಖಂಡರಾದ ಗಿರಯ್ಯ ಪಾಟೀಲ, ಶರಣಪ್ಪಗೌಡ, ಅಯ್ಯಪ್ಪ ನಾಯಕ ಭೇಟಿ ನೀಡಿ ಶುಭಾಶಯ ಕೋರಿದರು.

ಸಮೀಪದ ಕುರ್ಡಿ, ಪೊತ್ನಾಳ, ಮಾಡಗಿರಿ ಮತ್ತು ಜಾಗೀರ್‌ ಪನ್ನೂರು ಗ್ರಾಮಗಳ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಆಚರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry