7

ಕೇಂದ್ರ ಸಚಿವ ಹೆಗಡೆ ರಾಜೀನಾಮೆ ನೀಡಲಿ

Published:
Updated:

ದೇವನಹಳ್ಳಿ: ‘ಡಾ. ಬಿ.ಆರ್. ಅಂಬೇಡ್ಕರ್‌ ರಚಿಸಿರುವ ಸಂವಿಧಾನ ಬದಲಾಯಿಸುತ್ತೇವೆ ಎಂದು ಕೀಳು ಭಾವನೆಯಿಂದ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು’ ಎಂದು ಪ್ರಜಾವಿಮೋಚನಾ ಬಹುಜನ ಸಮಿತಿ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಬಿಜ್ಜವಾರ ನಾಗರಾಜ್‌ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಜಾತ್ಯತೀತ ತತ್ವ, ಆದರ್ಶ ಇಲ್ಲದ ಇಂತಹ ಸಚಿವರನ್ನು ಮತದಾರರು ಆಯ್ಕೆ ಮಾಡಿದ್ದು ದುರಂತ ಎಂದರು. ಮಾತಿನಲ್ಲಿ ಹಿಡಿತವಿಲ್ಲದ ಸಚಿವರು, ಪರಂಪರೆ, ಸಂಪ್ರದಾಯ, ಧರ್ಮ, ಜಾತಿಯನ್ನು ಹುಟ್ಟುಹಾಕಿದ್ದು ಯಾರು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಲಿ

ಎಂದರು.

ವಿಶ್ವವೇ ಮೆಚ್ಚುವಂತಹ ಸಂವಿಧಾನ ರಚಿಸಿದ ಸಂದರ್ಭದಲ್ಲಿ ಕರಡು ಸಮಿತಿಯಲ್ಲಿ ಮನುವಾದಿ ಸದಸ್ಯರಿದ್ದರು. ಸಮಿತಿ ನೀಡಿದ ಎಲ್ಲಾ ರೀತಿಯ ಶಿಫಾರಸು ಅನ್ವಯ ಸಂವಿಧಾನ ಅಸ್ತಿತ್ವಕ್ಕೆ ಬಂದಿದೆ. ಸಂವಿಧಾನಕ್ಕೆ ಒಂದು ಘನತೆ ಇದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry