ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆಗಳ ಜಾರಿಗೆ ಆದ್ಯತೆ

Last Updated 26 ಡಿಸೆಂಬರ್ 2017, 8:50 IST
ಅಕ್ಷರ ಗಾತ್ರ

ದಾವಣಗೆರೆ: ‘ನಮ್ಮ ಪಕ್ಷ ಆಡಳಿತಕ್ಕೆ ಬರುತ್ತಿದ್ದಂತೆ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಹರಿಹರದ ಗಾಂಧಿ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿಯಾದ ತಕ್ಷಣ ಕೇಂದ್ರದಿಂದ ₹ 1ಲಕ್ಷ ಕೋಟಿ ಅನುದಾನ ತಂದು ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುತ್ತೇನೆ’ ಎಂದು ಭರವಸೆ ನೀಡಿದರು. ‘ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಹರಿಹರದ ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೊಳಿಸಿ, ಕೋಮಾರನಹಳ್ಳಿ ಕೆರೆ ಹಾಗೂ ದೇವರಬೆಳಕೆರೆಗೆ ನೀರು ಹರಿಸಲಾಗುವುದು’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂದು ರಾಜ್ಯದೆಲ್ಲೆಡೆ ಬೊಗಳೆ ಬಿಡುತ್ತಿದ್ದೀರಿ. ಈಗಾಗಲೇ ₹ 2 ಲಕ್ಷ ಕೋಟಿ ಸಾಲ ಮಾಡಿದ್ದೀರಿ. ಆ ಹಣ ಎಲ್ಲಿ ಹೋಯಿತು’ ಎಂದು ಪ್ರಶ್ನಿಸಿದರು.

ವಿಧಾನಸಭೆ ಚುನಾವಣೆ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಕಾರ್ಯಕರ್ತರು ಪ್ರತಿ ಬೂತ್‌ಗಳಿಗೆ ತೆರಳಿ ಪಕ್ಷ ಸಂಘಟನೆ ಮಾಡಬೇಕು ಎಂದು ಕರೆ ನೀಡಿದರು. ‘ನಮಗೆ ಮತ್ತೊಮ್ಮೆ ಅವಕಾಶ ನೀಡಿ. ಎಲ್ಲರೂ ಸ್ವಾಭಿಮಾನದಿಂದ ಬದುಕುವಂತಹ ವಾತಾವರಣವನ್ನು ನಿರ್ಮಿಸುತ್ತೇನೆ’ ಎಂದು ಜನರಲ್ಲಿ ಮನವಿ ನೀಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಪ್ರಧಾನಿ ಮೋದಿ ಅವರು ಜಾರಿಗೊಳಿಸಿದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಕರೆ ನೀಡಿದರು.

ಬಿಜೆಪಿಗೆ ಸೇರ್ಪಡೆಯಾಗಿ ಮಾತನಾಡಿದ ಎನ್‌.ಜಿ.ನಾಗನಗೌಡ ಅವರು, ‘ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೆ ಆದ್ಯತೆ ನೀಡಬೇಕು. ಭದ್ರಾ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಮಾಡಬೇಕು. ರಾಜ್ಯದ ಎಲ್ಲಾ ರೈತರ ಸಾಲಮನ್ನಾ ಮಾಡಬೇಕು’ ಎಂದು ಯಡಿಯೂರಪ್ಪ ಅವರ ಮುಂದೆ ಬೇಡಿಕೆಯಿಟ್ಟರು.

ಮುಖಂಡರಾದ ಗೋವಿಂದ ಕಾರಜೋಳ, ತೇಜಸ್ವಿನಿ, ಬಿ.ಪಿ.ಹರೀಶ್‌, ಹನಗವಾಡಿ ಸುರೇಶ್‌ ಮಾತನಾಡಿದರು. ಮಾಜಿ ಸಚಿವ ಕರುಣಾಕರ ರೆಡ್ಡಿ, ಕೆ.ಶಿವರಾಂ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು, ಎಸ್‌.ವಿ.ರಾಮಚಂದ್ರಪ್ಪ, ರಾಜು ರೋಕಡೆ, ಮಾಡಾಳು ವಿರೂಪಾಕ್ಷಪ್ಪ, ಆನಂದಪ್ಪ, ವಾಗೀಶ್‌ ಸ್ವಾಮಿ, ಹೊಳಲ್ಕೆರೆ ಸುರೇಶ್‌ ಅವರೂ ಇದ್ದರು.

‘ದೈವಭಕ್ತನಲ್ಲ; ಜನಹಿತರಕ್ಷನೂ ಅಲ್ಲ’

‘ಸಿದ್ದರಾಮಯ್ಯ ಅವರೇ ನೀವು ಮೀನು ತಿಂದು, ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದರ್ಶನ ಪಡೆಯಲು ಹೋಗಿದ್ದೀರಿ. ಆದರೆ, ನಿಮಗೆ ಸ್ವಾ

ಬಿ.ಪಿ.ಹರೀಶ್‌ ಗೆಲ್ಲಿಸಿ: ಬಿಎಸ್‌ವೈ

ಹರಿಹರ ವಿಧಾನಸಭಾ ಕ್ಷೇತ್ರದ ಜನರು ಮುಂಬರುವ ಚುನಾವಣೆಯಲ್ಲಿ ಬಿ.ಪಿ.ಹರೀಶ್‌ ಅವರನ್ನು ಗೆಲ್ಲಿಸಬೇಕು ಎಂದು ಯಡಿಯೂರಪ್ಪ ಜನರಲ್ಲಿ ಮನವಿ ಮಾಡುತ್ತಿದ್ದಂತೆ ಜನರು ಸಿಳ್ಳೆ ಹೊಡೆದು ಸಂಭ್ರಮಿಸಿದರು. ಕ್ಷೇತ್ರದ ಇತರೆ ಆಕಾಂಕ್ಷಿಗಳಿಗೂ ಬೇರೆ ಸ್ಥಾನಗಳನ್ನು ನೀಡಲಾಗುವುದು ಎಂದು ಇದೇ ಸಮಯದಲ್ಲಿ ಯಡಿಯೂರಪ್ಪ ಭರವಸೆ ನೀಡಿದರು.

ಬಿಜೆಪಿಗೆ ಸೇರ್ಪಡೆ

ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರಂಭದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಕೆ.ದೇವೇಂದ್ರಪ್ಪ ಹಾಗೂ ಎನ್‌.ಜಿ.ನಾಗನಗೌಡ, ಎ.ಪಿ.ಆನಂದ, ಸಾಕಮ್ಮ, ಮಂಜಮ್ಮ, ಬಾಬಣ್ಣ, ಜ್ಯೋತಿ ಪ್ರಕಾಶ್‌, ಮಂಜಣ್ಣ, ಮಾರುತಿ, ತಿಪ್ಪೇಶಿ, ಗರಡಿಮನಿ ಬಸಣ್ಣ ಅವರು ಬಿಜೆಪಿಗೆ ಸೇರ್ಪಡೆಯಾದರು.

ಪರ್ಸ್‌ ಕಳವು

ಜನಜಂಗುಳಿಯಿಂದ ತುಂಬಿದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರ ಪರ್ಸ್‌ನ್ನು ಕಳವು ಮಾಡಲಾಗಿತ್ತು. ‘ಪರ್ಸ್‌ನಲ್ಲಿರುವ ಹಣ ತೆಗೆದುಕೊಂಡು, ಅದರಲ್ಲಿರುವ ಪೆನ್‌ಡ್ರೈವ್‌ನ್ನು ತಂದುಕೊಡಿ’ ಎಂದು ಕಾರ್ಯಕರ್ತರೊಬ್ಬರು ಮೈಕ್‌ನಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT