7

ಮಗನಿಗೆ ಕಾಡೇ ಉಡುಗೊರೆ

Published:
Updated:
ಮಗನಿಗೆ ಕಾಡೇ ಉಡುಗೊರೆ

ಹುಟ್ಟುಹಬ್ಬಕ್ಕೆ ಕಾರು, ಚಿನ್ನ ಗಿಫ್ಟ್‌ ನೀಡುವುದು ಮಾಮೂಲಿ. ಆದರೆ ಕರೀನಾ ಇದರಲ್ಲಿ ಭಿನ್ನ. ಡಿಸೆಂಬರ್ 20ರಂದು ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮಗ ತೈಮೂರ್‌ಗೆ ಅಮ್ಮ ಕರೀನಾ ಹಾಗೂ ಪೌಷ್ಟಿಕಾಂಶ ತಜ್ಞೆ ರುಟುಜಾ ದಿವಾಕರ್‌ ಸಣ್ಣ ಕಾಡನ್ನೇ ಉಡುಗೊರೆಯಾಗಿ ನೀಡಿದ್ದಾರೆ.

ಮುಂಬೈನಿಂದ 50 ಕಿ.ಮೀ ದೂರವಿರುವ ಸೋನವೆ ಎಂಬ ಪ್ರದೇಶದಲ್ಲಿ 1000 ಚದರ ಅಡಿಯ ಸಣ್ಣದಾದ ಕಾಡನ್ನು ತೈಮೂರ್‌ ತನ್ನ ಹೆಸರಿನಲ್ಲಿ ಉಡುಗೊರೆಯಾಗಿ ಪಡೆದಿದ್ದಾನೆ. ಈ ಪ್ರದೇಶ ನೋಡಲು ಪುಟ್ಟ ಕಾಡಂತಿದ್ದು, ಇದರಲ್ಲಿ 3 ನೇರಳೆ ಗಿಡ, ಒಂದು ನೆಲ್ಲಿಕಾಯಿ, ಒಂದು ಹಲಸಿನಮರ, 40 ಬಾಳೆಗಿಡಗಳು, ಕೊಕ್ಕೊ ಗಿಡಗಳು, ಪಪ್ಪಾಯ ಗಿಡಗಳು, 14 ನುಗ್ಗೆ ಗಿಡ, 5 ಸೀತಾಫಲ ಗಿಡಗಳು ಹಾಗೂ ನಿಂಬೆಗಿಡಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry