‘ಸಮ್ಮೇಳನ: ಖರ್ಚು ವೆಚ್ಚದ ವಿವರ ಒದಗಿಸಿ’

7

‘ಸಮ್ಮೇಳನ: ಖರ್ಚು ವೆಚ್ಚದ ವಿವರ ಒದಗಿಸಿ’

Published:
Updated:

ಖಾನಾಪುರ: ಇದೇ 10ರಂದು ತಾಲ್ಲೂಕಿನ ದೇವಲತ್ತಿ ಗ್ರಾಮದಲ್ಲಿ ಆಯೋಜಿಸಿರುವ 5ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮೊದಲು 2016ರಲ್ಲಿ ಬೀಡಿ ಗ್ರಾಮದಲ್ಲಿ ನಡೆದ 4ನೇ ಸಮ್ಮೇಳದ ಖರ್ಚು–ವೆಚ್ಚದ ವಿವರ ಒದಗಿಸಬೇಕು ಎಂದು ಬೀಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿದ್ಯಾ ಹಡಪದ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ವಿ.ವಿ. ಬಡಿಗೇರ ಅವರನ್ನು ಆಗ್ರಹಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ಬೀಡಿಯಲ್ಲಿ ನಡೆದ ಸಮ್ಮೇಳನದ ಯಶಸ್ಸಿಗೆ ಗ್ರಾಮದ ವಿವಿಧ ಸಂಘ– ಸಂಸ್ಥೆ, ಗ್ರಾಮ ಪಂಚಾಯ್ತಿಯವರು ಹಾಗೂ ಗ್ರಾಮಸ್ಥರು ಶ್ರಮಿಸಿದ್ದರು. ದಾನಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದ್ದರು. 14 ತಿಂಗಳು ಕಳೆದರೂ ಖರ್ಚು–ವೆಚ್ಚದ ಮಾಹಿತಿ ನೀಡಿಲ್ಲ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry