ಅಪರಾಧ ಹಿನ್ನೆಲೆ: ಗಡಿಪಾರಿಗೆ ಆದೇಶ

7

ಅಪರಾಧ ಹಿನ್ನೆಲೆ: ಗಡಿಪಾರಿಗೆ ಆದೇಶ

Published:
Updated:

ಗಂಗಾವತಿ: ಅಪರಾಧ ಹಿನ್ನೆಲೆಯ  ಇಬ್ಬರು ಯುವಕರನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಿಂದ ಚಾಮರಾಜನಗರ ಹಾಗೂ ಬೀದರ್ ಜಿಲ್ಲೆಗೆ ಗಡೀಪಾರು ಮಾಡಿ ಸಹಾಯಕ ಆಯುಕ್ತ ಗುರುದತ್ ಹೆಗ್ಡೆ ಆದೇಶ ಮಾಡಿದ್ದಾರೆ.

ನಗರದ ಲಿಂಗರಾಜ ಕ್ಯಾಂಪಿನ ನಿವಾಸಿ ಜುಬೇರ ಖಲೀಲಸಾಬ ಎಂಬ ಯುವಕನನ್ನು ಚಾಮರಾಜ ನಗರ ಹಾಗೂ ಹೊಸಕೇರಿ ಗ್ರಾಮದ ಶ್ರೀಕಾಂತ ಬಸವರಾಜ ಎಂಬ ಯುವಕನನ್ನು ಬೀದರ್ ಜಿಲ್ಲೆಗೆ ಗಡೀಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಶನಿವಾರ ಸಂಜೆಯೇ ಈ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಕೊಪ್ಪಳದಿಂದ ಆಯಾ ಜಿಲ್ಲೆಯ ಗಡಿಗೆ ಕರೆದುಕೊಂಡು ಹೋಗಿ ಗಡೀಪಾರು ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry