ದೆಹಲಿಯಲ್ಲಿ ಹೊಂಜು: ವಿಮಾನ ಹಾರಾಟ, ರೈಲು ಸಂಚಾರ ವ್ಯತ್ಯಯ

7

ದೆಹಲಿಯಲ್ಲಿ ಹೊಂಜು: ವಿಮಾನ ಹಾರಾಟ, ರೈಲು ಸಂಚಾರ ವ್ಯತ್ಯಯ

Published:
Updated:
ದೆಹಲಿಯಲ್ಲಿ ಹೊಂಜು: ವಿಮಾನ ಹಾರಾಟ, ರೈಲು ಸಂಚಾರ ವ್ಯತ್ಯಯ

ನವದೆಹಲಿ: ದಟ್ಟವಾದ ಹೊಂಜು ಆವರಿಸಿರುವ ಕಾರಣ ಸೋಮವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ವಿಳಂಬವಾಗಿದೆ.

ಐದು ಪ್ರಾದೇಶಿಕ ವಿಮಾನಗಳು ಹಾಗೂ ಏಳು ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ತಡೆಯಾಗಿದ್ದು, ಒಂದು ವಿಮಾನದ ಹಾರಾಟ ರದ್ದು ಪಡಿಸಲಾಗಿದೆ ಎಂದು ಎನ್‌ಎನ್‌ಐ ವರದಿ ಮಾಡಿದೆ.

ನವದೆಹಲಿ ಸಾಕಷ್ಟು ಕಡೆ ಹೊಂಜು ಹರಡಿರುವುದರಿಂದ ರೈಲು ಸಂಚಾರಕ್ಕೆ ಕೂಡ ಅಡಚಣೆಯಾಗಿದೆ. ಈವರೆಗೆ 15 ರೈಲುಗಳ ಸಂಚಾರ ರದ್ದು ‍ಪಡಿಸಲಾಗಿದ್ದು, 56 ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ.

ಸೋಮವಾರ ಬೆಳಿಗ್ಗೆ ಇಲ್ಲಿನ ಉಷ್ಣಾಂಶ 5.7 ಡಿಗ್ರಿ ಸೆಲ್ಸಿಯಸ್‌ ಕನಿಷ್ಠತೆ ದಾಖಲಾಗಿದ್ದು, ವಾಯು ಮಾಲಿನ್ಯದ ಪ್ರಮಾಣದ ಅಪಾಯದ ಹಂತ ತಲುಪಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ವಾತಾವರಣ ಸ್ಪಷ್ಟವಾಗಿ ಗೋಚರಿಸದ ಕಾರಣ ಭಾನುವಾರ ಸಹ 350 ವಿಮಾನಗಳ ಹಾರಾಟ ಸಮಯ ವ್ಯತ್ಯಯವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry