ಬುಧವಾರ, ಜೂಲೈ 8, 2020
21 °C

ಸಮಾನ ಪಿಂಚಣಿ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಾನವಾದ ಪಿಂಚಣಿ ನೀಡುವ ವ್ಯವಸ್ಥೆ ಜಾರಿ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಕಾಶಿನಾಥ ಬೀದರಕರ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಮಾಜಿ ಮತ್ತು ಹಾಲಿ ಸಂಸದ, ಶಾಸಕರಿಗೆ ಪಿಂಚಣಿ ನೀಡುವುದಕ್ಕೆ ಯಾವುದೇ ತರಹದ ತೊಂದರೆಗಳಿಲ್ಲ. ಆದರೆ ನಿವೃತ್ತ ನೌಕರರಿಗೆ ಔಷಧಿ, ಪಿಂಚಣಿ ನೀಡಲು ಇಂದಿನ ಸರ್ಕಾರ ಹಲವಾರು ಸಮಸ್ಯೆಗಳನ್ನು ಹೇಳುತ್ತದೆ. ಔಷಧ ಮತ್ತು ಸಮಾನವಾದ ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರದ 7ನೇ ವೇತನ ಆಯೋಗ ಜಾರಿಮಾಡಿದಂತೆ ರಾಜ್ಯ ಸರ್ಕಾರಕ್ಕೂ 7ನೇ ವೇತನ ಆಯೋಗ ಜಾರಿಗೆ ಮಾಡಬೇಕು. 25 ರಾಜ್ಯಗಳಲ್ಲಿ 7ನೇ ವೇತನ ಆಯೋಗ ಜಾರಿಯಾಗಿದೆ. ಅದರಂತೆ ನಮ್ಮ ರಾಜ್ಯದಲ್ಲೂ 7ನೇ ವೇತನ ಆಯೋಗ ಜಾರಿಗೆ ಮಾಡಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾ.ಸಿ.ಗಂಜಲಖೇಡ, ಉಪಾಧ್ಯಕ್ಷ ಎಸ್‌.ವಿ.ಮಠಪತಿ, ಮುಖಂಡರಾದ ನಾಗಣ್ಣ ಎಸ್‌.ಗಣಜಲಖೇಡ, ವೀರಣ್ಣ ಎಂ.ಪಡಶೆಟ್ಟಿ, ಕಾಶಪ್ಪ ವಾಂಜರಖೇಡ, ಆರ್‌.ಎಸ್‌.ಪಾಟೀಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.