ಕನ್ನಡ ನಾಡು ನುಡಿಗೆ ಶ್ರಮಿಸಿದವರಿಗೆ ಗೌರವಾರ್ಪಣೆ

7
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೆಂಕಟಾಚಲರಿಗೆ ಆಹ್ವಾನ

ಕನ್ನಡ ನಾಡು ನುಡಿಗೆ ಶ್ರಮಿಸಿದವರಿಗೆ ಗೌರವಾರ್ಪಣೆ

Published:
Updated:

ಶ್ರೀನಿವಾಸಪುರ: ‘ಕನ್ನಡ ನಾಡು, ನುಡಿಯ ಅಭಿವೃದ್ಧಿಗಾಗಿ ಶ್ರಮಿಸಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಸಂಪ್ರದಾಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಪಾಲಿಸಿಕೊಂಡು ಬರುತ್ತಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.

9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ವೈ.ವಿ.ವೆಂಕಟಾಚಲ ಅವರನ್ನು ಪಟ್ಟಣದ ಅವರ ನಿವಾಸದಲ್ಲಿ ಭಾನುವಾರ ಸನ್ಮಾನಿಸಿ ಸಮ್ಮೇಳನಕ್ಕೆ ಆಹ್ವಾನಿಸಿ ಮಾತನಾಡಿದರು.

ಡಾ. ವೈ.ವಿ.ವೆಂಕಟಾಚಲ ಕನ್ನಡ ಪರಿಚಾರಕರಾಗಿ ನಾಡು ನುಡಿಯ ಸೇವೆ ಮಾಡುತ್ತಿದ್ದಾರೆ. ವೈದ್ಯಕೀಯದಲ್ಲಿ ಕನ್ನಡ ಭಾಷೆಗೆ ಮಹತ್ವ ನೀಡಿದ್ದಾರೆ. ಅವರನ್ನು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎನ್‌.ಕುಬೇರಗೌಡ, ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತಿ್ತನ ಪದಾಧಿಕಾರಿಗಳಾದ ಟಿ.ಚಂದ್ರಪ್ಪ, ರತ್ನಪ್ಪ ಮೇಲಾಗಾಣಿ, ಚಲಪತಿ, ಚಂದ್ರಾಚಾರಿ, ಚಂದ್ರಪ್ಪ, ಬಿ.ಎನ್‌.ಗೋಪಾಲಗೌಡ, ಶಂಕರ್‌, ಎಂ.ನಾಗರಾಜ್‌, ಕೆ.ಎಂ.ಚೌಡಪ್ಪ, ಎಸ್‌.ಲಕ್ಷ್ಮಣಬಾಬು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry