ಮುಂಬೈ ಅಗ್ನಿ ಅವಘಡ: ‘1–ಅಬವ್‌’ ಪಬ್‌ನ ಇಬ್ಬರು ವ್ಯವಸ್ಥಾಪಕರ ಬಂಧನ

7

ಮುಂಬೈ ಅಗ್ನಿ ಅವಘಡ: ‘1–ಅಬವ್‌’ ಪಬ್‌ನ ಇಬ್ಬರು ವ್ಯವಸ್ಥಾಪಕರ ಬಂಧನ

Published:
Updated:
ಮುಂಬೈ ಅಗ್ನಿ ಅವಘಡ: ‘1–ಅಬವ್‌’ ಪಬ್‌ನ ಇಬ್ಬರು ವ್ಯವಸ್ಥಾಪಕರ ಬಂಧನ

ಮುಂಬೈ: ಕಮಲಾ ಮಿಲ್‌ ಆವರಣದ ‘1–ಅಬವ್‌’ ಪಬ್‌ನಲ್ಲಿ ಸಂಭವಿಸಿದ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಪಬ್‌ನ ಇಬ್ಬರು ವ್ಯವಸ್ಥಾಪಕರನ್ನು ಎನ್ ಎಂ ಜೋಷಿ ಮಾರ್ಗ್‌ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಶುಕ್ರವಾರ 1–ಅಬವ್‌ ಪಬ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ 14 ಮಂದಿ ಆಹುತಿಯಾಗಿದ್ದರು.

ಈ ಪ್ರಕರಣದ ಸಂಬಂಧ ಪಬ್‌ನ ಉದ್ಯೋಗಿಗಳಾದ ಕೆವಿನ್‌ ಬಾವಾ ಮತ್ತು ನೆಲ್ಸನ್‌ ಲೊಪೇಜ್‌ ಬಂಧಿಸಿರುವುದಾಗಿ ಡಿಸಿಪಿ ದೀಪಕ್‌ ದಿಯೊರಾಜ್‌ ಸ್ಪಷ್ಟಪಡಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ಪಬ್‌ನಲ್ಲಿಯೇ ಇದ್ದ ಈ ಇಬ್ಬರು ಗ್ರಾಹಕರಿಗೆ ತುರ್ತು ದ್ವಾರದ ಮಾರ್ಗ ತೋರಿಸದೆ ಹಾಗೂ ಯಾವುದೇ ಸಹಾಯ ಮಾಡದೆ ತಪ್ಪಿಸಿಕೊಂಡಿದ್ದರು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಮಾಲೀಕರ ಸಂಬಂಧಿಗಳಾದ ರಾಕೇಶ್‌ ಸಾಂಘ್ವಿ ಮತ್ತು ಆದಿತ್ಯ ಸಾಂಘ್ವಿ ಬಂಧನವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry