ಸೋಮವಾರ, ಆಗಸ್ಟ್ 3, 2020
25 °C

ಅಣ್ವಸ್ತ್ರ ಬಟನ್‌ ನನ್ನ ಮೇಜಿನ ಮೇಲಿದೆ: ಕಿಮ್‌ ಜಾಂಗ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಅಣ್ವಸ್ತ್ರ ಬಟನ್‌ ನನ್ನ ಮೇಜಿನ ಮೇಲಿದೆ: ಕಿಮ್‌ ಜಾಂಗ್

ಸೋಲ್‌: ಅಣ್ವಸ್ತ್ರ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ಅಮೆರಿಕ ಜತೆಗೆ ಉತ್ತರ ಕೊರಿಯಾದ ಸಂಘರ್ಷ ಮುಂದುವರಿದಿದ್ದು, ಹೊಸ ವರ್ಷದ ಮೊದಲ ದಿನವೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಬೆದರಿಕೆ ಒಡ್ಡಿದ್ದಾರೆ.

‘ಉತ್ತರ ಕೊರಿಯಾವು ಅಣ್ವಸ್ತ್ರ ರಾಷ್ಟ್ರವಾಗಿದೆ. ಅಮೆರಿಕದ ಬಹುಪಾಲು ಭಾಗವನ್ನು ತಲುಪುವ ಅಣ್ವಸ್ತ್ರ ಶಕ್ತಿಗಳಿದ್ದು, ಅಣ್ವಸ್ತ್ರದ ಬಟನ್‌ ನನ್ನ ಮೇಜಿನ ಮೇಲೆ ಇದೆ. ಇದು ಬೆದರಿಕೆಯಲ್ಲ, ವಾಸ್ತವ’ ಎಂದು ಅಮೆರಿಕಕ್ಕೆ ಕಿಮ್‌ ಜಾಂಗ್ ಎಚ್ಚರಿಸಿದ್ದಾರೆ.

‘ಉತ್ತರ ಕೊರಿಯಾವು ಶಾಂತಿಯುತ ಹಾಗೂ ಜವಾಬ್ದಾರಿಯುತ ರಾಷ್ಟ್ರವಾಗಿದೆ. ನಮ್ಮ ವಿರುದ್ಧ ಎಲ್ಲಿಯ ತನಕ ಆಕ್ರಮಣಕಾರಿ ನಡೆ ಇರುವುದಿಲ್ಲವೋ ಅಲ್ಲಿಯ ತನಕ ನಾವು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ. ಶಕ್ತಿಯುತ ಅಣ್ವಸ್ತ್ರ ರಾಷ್ಟ್ರವಾಗಿರುವ ನಮ್ಮ ಮೇಲೆ ದಾಳಿ ನಡೆಸುವ ಧೈರ್ಯವನ್ನು ಅಮೆರಿಕ ತೋರಲಾರದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.