ಬುಧವಾರ, ಜೂಲೈ 8, 2020
23 °C

‘ಪಿಸಿಬಿಗೆ ದ್ರಾವಿಡ್‌ರಂತಹ ಕೋಚ್ ಅಗತ್ಯವಿದೆ’

ಪಿಟಿಐ Updated:

ಅಕ್ಷರ ಗಾತ್ರ : | |

‘ಪಿಸಿಬಿಗೆ ದ್ರಾವಿಡ್‌ರಂತಹ ಕೋಚ್ ಅಗತ್ಯವಿದೆ’

ಕರಾಚಿ: ‘ಪಾಕಿಸ್ತಾನದ 19 ವರ್ಷದೊಳಗಿನವರ ತಂಡಕ್ಕೆ ಭಾರತದ ಹಿರಿಯ ಆಟಗಾರ ರಾಹುಲ್‌ ದ್ರಾವಿಡ್‌ ಅವರಂತಹ ಕೋಚ್‌ ಅಗತ್ಯವಿದೆ’ ಎಂದು ಪಾಕಿಸ್ತಾನದ ಹಿರಿಯ ಆಟಗಾರ ರಮೀಜ್‌ ರಾಜಾ ಪಿಸಿಬಿಗೆ ಸಲಹೆ ನೀಡಿದ್ದಾರೆ.

‘ಪಾಕ್‌ ಜೂನಿಯರ್ ತಂಡಕ್ಕೆ ಅನುಭವಿ ಹಿರಿಯ ಟೆಸ್ಟ್‌ ಆಟಗಾರರನ್ನು ಕೋಚ್ ಆಗಿ ನೇಮಕ ಮಾಡಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಭಾರತ ಒಳ್ಳೆಯ ಪ್ರಯತ್ನ ಮಾಡಿದೆ. 19 ವರ್ಷದೊಳಗಿನವರ ಹಾಗೂ ‘ಎ’ ತಂಡಕ್ಕೆ ರಾಹುಲ್ ಕೋಚ್ ಆಗಿದ್ದಾರೆ. ಪಾಕಿಸ್ತಾನ ಕೂಡ ಹೊಸ ರೀತಿಯಲ್ಲಿ ಯೋಚಿಸಬೇಕು’ ಎಂದು ರಮಿಜ್‌ ಹೇಳಿದ್ದಾರೆ.

‘ನ್ಯೂಜಿಲೆಂಡ್‌ನಲ್ಲಿ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ನಡೆಯಲಿದೆ. ಪಾಕಿಸ್ತಾನ ತಂಡ ಈಗಾಗಲೇ ಅಭ್ಯಾಸ ಪ್ರಾರಂಭಿಸಿದೆ. ಸೀನಿಯರ್‌ ತಂಡದ ಬೆಳವಣಿಗೆಗಿಂತ ಭವಿಷ್ಯದ ಆಟಗಾರರನ್ನು ರೂಪಿಸುವುದಕ್ಕಾಗಿ ಜೂನಿಯರ್ ಆಟಗಾರರ ಮೇಲೆ ಪಿಸಿಬಿ ಹೆಚ್ಚು ಗಮನ ಕೊಡುವ ಅಗತ್ಯವಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.