ಬುಧವಾರ, ಆಗಸ್ಟ್ 5, 2020
23 °C

ಬಿಎಂಟಿಸಿ ಬಸ್‌: ಪ್ರಥಮ ಚಿಕಿತ್ಸಾ ಪೆಟ್ಟಿಗೆ ಖಾಲಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಂಟಿಸಿ ಬಸ್‌: ಪ್ರಥಮ ಚಿಕಿತ್ಸಾ ಪೆಟ್ಟಿಗೆ ಖಾಲಿ!

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಅಳವಡಿಸಿರುವ ಬಹುತೇಕ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಖಾಲಿ ಇವೆ!

ಕೆಲವು ಬಸ್‌ಗಳಲ್ಲಿರುವ ಪೆಟ್ಟಿಗೆಯಲ್ಲಿ ಔಷಧ ಇದೆ. ಆದರೆ, ಅವುಗಳ ಅವಧಿ ಮೀರಿದೆಯೇ ಮುಗಿದಿದೆಯೇ, ಇಲ್ಲವೇ ಎಂಬುದರ ಬಗ್ಗೆ  ಸಿಬ್ಬಂದಿಗೇ ಅರಿವಿಲ್ಲ.

ಈ ಬಗ್ಗೆ ವಿಚಾರಿಸಿದರೆ, ‘ಬಸ್‌ಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು ಇಲಾಖೆಯ ನಿರ್ವಹಣಾ ಸಿಬ್ಬಂದಿಯ ಕೆಲಸ. ಈ ಬಗ್ಗೆ ನಾವೇನೂ ಮಾಡಲು ಸಾಧ್ಯವಿಲ್ಲ’ ಎಂದು ಬಸ್‌ ನಿರ್ವಾಹಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

‘ಬಿಎಂಟಿಸಿ ಬಸ್‌ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ಅಗತ್ಯ ಇಲ್ಲ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಅದನ್ನು ಬಳಸುತ್ತೇವೆ. ಅಂತಹ ಪರಿಸ್ಥಿತಿ ಸೃಷ್ಟಿ

ಯಾಗುವುದು ಅಪರೂಪ’ ಎಂದು ಇನ್ನೊಬ್ಬ ಸಿಬ್ಬಂದಿ ಹೇಳಿದರು.

‘ಬಿಎಂಟಿಸಿಯ ಬಹುತೇಕ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯೇ ಇಲ್ಲ. ಸುರಕ್ಷತಾ ಕ್ರಮಗಳನ್ನು ಅವರು ಪಾಲಿಸುವುದಿಲ್ಲ. ದೊಡ್ಡ ಅನಾಹುತ ಜರುಗಿದಾಗ ಮಾತ್ರ ಅವರು ಎಚ್ಚೆತ್ತುಕೊಳ್ಳುತ್ತಾರೆ’ ಎಂದು ದೂರುತ್ತಾರೆ ಪ್ರಯಾಣಿಕ ವೇಣುಗೋಪಾಲ್‌.

ಬಸ್‌, ಟ್ರಕ್‌, ಕ್ಯಾಬ್‌, ಆಟೊದಂತಹ ವಾಹನಗಳು ಕಡ್ಡಾಯವಾಗಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹೊಂದಿರಬೇಕು ಎನ್ನುತ್ತಾರೆ ಸಾರಿಗೆ ತಜ್ಞ ಎಂ.ಎನ್‌. ಶ್ರೀಹರಿ.

‘ಬಿಎಂಟಿಸಿ ಬಸ್‌ಗಳಿಗೆ ಒದಗಿಸಿರುವ ಬಹುತೇಕ ಔಷಧಗಳ ಬಳಕೆ ಅವಧಿ ಮುಗಿದಿದೆ. ಯಾರಾದರೂ ಅವುಗಳನ್ನು ಬಳಸಿದರೆ ತೊಂದರೆಗೆ ಒಳಗಾಗುವ ಅಪಾಯ ಇದೆ’ ಎಂದು ಅವರು ತಿಳಿಸಿದರು.

ಒದಗಿಸಲು ಕ್ರಮ

‘ನಗರದ ಬಸ್‌ಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಬಸ್‌ಗಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ಅಗತ್ಯ ಹೆಚ್ಚು. ನಗರದಲ್ಲಿ ಎಲ್ಲೆಡೆ ಔಷಧ ಅಂಗಡಿಗಳು ಹಾಗೂ ಆಸ್ಪತ್ರೆಗಳು ಇವೆ. 108 ಆಂಬುಲೆನ್ಸ್‌ ಸನ್ನದ್ಧವಾಗಿರುತ್ತವೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಪ್ರಯಾಣಿಕ

ರನ್ನು ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆ ದಾಖಲಿಸಬಹುದು’ ಎನ್ನುತ್ತಾರೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್‌.

‘ಆದರೂ ಎಲ್ಲ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಅವರು ಭರವಸೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.