ಹೊಸ ವರ್ಷದಲ್ಲಿ ಹುಟ್ಟಿದ್ದಕ್ಕೆ ₹5 ಲಕ್ಷ

7

ಹೊಸ ವರ್ಷದಲ್ಲಿ ಹುಟ್ಟಿದ್ದಕ್ಕೆ ₹5 ಲಕ್ಷ

Published:
Updated:
ಹೊಸ ವರ್ಷದಲ್ಲಿ ಹುಟ್ಟಿದ್ದಕ್ಕೆ ₹5 ಲಕ್ಷ

ಬೆಂಗಳೂರು: ರಾಜಾಜಿನಗರದ ನಾಗರಾಜ್‌ ಸ್ಮಾರಕ ಹೆರಿಗೆ ಆಸ್ಪತ್ರೆಯಲ್ಲಿ ಹೊಸ ವರ್ಷದ ಮೊದಲ ದಿನ ಪುಷ್ಪಾ ಗೋಪಿ ಎಂಬುವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ₹5 ಲಕ್ಷ ಮೊತ್ತವನ್ನು ಮೇಯರ್‌ ಆರ್‌.ಸಂಪತ್‌ ರಾಜ್‌ ಸೋಮವಾರ ವಿತರಿಸಿದರು.

ಪಾಲಿಕೆಯ ಆಸ್ಪತ್ರೆಯಲ್ಲಿ ಹೊಸ ವರ್ಷದ ದಿನ ಮೊದಲು ಹುಟ್ಟುವ ಹೆಣ್ಣು ಮಗುವಿಗೆ ₹5 ಲಕ್ಷ ನೀಡುವುದಾಗಿ ಮೇಯರ್‌ ಘೋಷಿಸಿದ್ದರು. ಪುಷ್ಪಾ ಅವರು ಭಾನುವಾರ ಮಧ್ಯರಾತ್ರಿ 12.05ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಸಂಪತ್‌ ರಾಜ್‌ ಅವರು ಪುಷ್ಪಾ ಅವರಿಗೆ ಶುಭಾಶಯ ಕೋರಿದರು. ಮಗುವಿನ ಹೆಸರಿನಲ್ಲಿ ಈ ಹಣವನ್ನು ಠೇವಣಿ ಇಟ್ಟು, ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು.

‘ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿರುವ ಎನ್‌ಜಿಒ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದೇವೆ. ಪಾಲಿಕೆಯವರು ಮೊದಲ ಹೆಣ್ಣು ಮಗುವಿಗೆ ₹5 ಲಕ್ಷ ನೀಡುವ ಕುರಿತು ಮಾಹಿತಿ ಇರಲಿಲ್ಲ. ಮಗು ಹುಟ್ಟಿದ ತಕ್ಷಣ ಹಣ ಕೊಡುವ ಬಗ್ಗೆ ವೈದ್ಯರು ಹೇಳಿದ್ದರು. ಆದರೆ, ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ’ ಎಂದು ಪುಷ್ಪಾ ಅವರು ತಮ್ಮ ಅನುಭವ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry