ವಾರದಲ್ಲಿ ಕ್ಯಾಂಟೀನ್‌ ಉದ್ಘಾಟನೆ: ಶಾಸಕ

7

ವಾರದಲ್ಲಿ ಕ್ಯಾಂಟೀನ್‌ ಉದ್ಘಾಟನೆ: ಶಾಸಕ

Published:
Updated:

ಶ್ರೀರಂಗಪಟ್ಟಣ: ‘ಜ. 12ರಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಯಾಂಟೀನ್‌ ಆರಂಭವಾಗಲಿದೆ’ ಎಂದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಡಿಜಿಟಲ್‌ ಎಕ್‌್ಸ–ರೇ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ರಿಯಾಯಿತಿ ದರದಲ್ಲಿ ಆಹಾರ ಮತ್ತು ಪಾನೀಯ ಸಿಗಲಿದೆ. ಗುಣಮಟ್ಟದ ಆಹಾರ ನೀಡುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ಅಂದಿನ ದಿನವೇ ಆಸ್ಪತ್ರೆ ಐಸಿಯು ಘಟಕದ ಕೂಡ ಉದ್ಘಾಟನೆಯಾಗಲಿದೆ. ವಿವಿಧ ಕಾಮಗಾರಿಗಳಿಗೆ ನಾಲನಡ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಐಸಿಯು ಘಟಕಕ್ಕೂ ಚಾಲನೆ ನೀಡಲಿದ್ದಾರೆ’ ಎಂದು ಹೇಳಿದರು.

‘ಆಸ್ಪತ್ರೆಯಲ್ಲಿ ಡಿಜಿಟಲ್‌ ಎಕ್‌–ರೇ ಕೇಂದ್ರ ಆರಂಭವಾಗಿರುವುದರಿಂದ ಕ್ಷ–ಕಿರಣದ ನಿಖರವಾದ ಫಲಿತಾಂಶ ಸಿಗಲಿದೆ. ₹ 11 ಲಕ್ಷ ವೆಚ್ಚದಲ್ಲಿ ಈ ಕೇಂದ್ರ ಆರಂಭಿಸಿದ್ದು, ಕೆಲವೇ ನಿಮಿಷಗಳಲ್ಲಿ ಫಲಿತಾಂಶ ಸಿಗುವುದರಿಂದ ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿಗಳ ಸಮಯ ಕೂಡ ಉಳಿಯಲಿದೆ’ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್‌, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಾರುತಿ ಇತರರು ಈ ಸಂದರ್ಭದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry