ಸೋಮವಾರ, ಆಗಸ್ಟ್ 3, 2020
26 °C

ತ್ರಿವಳಿ ತಲಾಖ್: ಮುಸ್ಲಿಂ ಮಹಿಳೆಯರು ಖುಷಿಯಾಗಿದ್ದಾರೆ ಆದರೆ ಕಾಂಗ್ರೆಸ್ ಗಲಿಬಿಲಿಗೊಂಡಿದೆ: ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ರಿವಳಿ ತಲಾಖ್: ಮುಸ್ಲಿಂ ಮಹಿಳೆಯರು ಖುಷಿಯಾಗಿದ್ದಾರೆ ಆದರೆ ಕಾಂಗ್ರೆಸ್ ಗಲಿಬಿಲಿಗೊಂಡಿದೆ: ಬಿಜೆಪಿ

ನವದೆಹಲಿ: ತ್ರಿವಳಿ ತಲಾಖ್‌ ಪದ್ಧತಿಯನ್ನು ನಿಷೇಧಿಸುವ ‘ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ಸಂರಕ್ಷಣೆ) ಮಸೂದೆ– 2017’ ಮಂಗಳವಾರ  ರಾಜ್ಯಸಭೆಯಲ್ಲಿ ಮಂಡನೆಯಾಗಿದೆ.

ರಾಜ್ಯಸಭೆಯಲ್ಲಿನ ಚರ್ಚೆಯ ಕ್ಷಣ ಕ್ಷಣದ ಸುದ್ದಿ

ಮಧ್ಯಾಹ್ನ 1. 28:  ಅಂತರ ಜಾತೀಯ ವಿವಾಹವಾದ ದಂಪತಿಗಳಿಗೆ ನೀಡುವ  ಆರ್ಥಿಕ ನೆರವು ಮೊತ್ತ ರು.2.5 ಲಕ್ಷ ದಿಂದ ಏರಿಕೆ ಮಾಡುವ ಯಾವುದೇ ಉದ್ದೇಶ ಇಲ್ಲ  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ವಿಜಯ್ ಸಂಪ್ಲಾ ಹೇಳಿದ್ದಾರೆ.

1.14: ಚುನಾವಣಾ ಸಂಹಿತೆಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸದಸ್ಯ ರಾಜೀವ್ ಶುಕ್ಲಾ, ವಿವಿಪಿಎಟಿ (ವೋಟರ್ ವೆ ರಿಫೈಡ್ ಪೇಪರ್ ಆಡಿಟ್ ಟ್ರಯಲ್) ಮತ್ತು ಇವಿಎಂಗಳಲ್ಲಿನ ಮತ ಪತ್ರ ಎಣಿಕೆಗೆ ನಿರ್ದಿಷ್ಟ ಸಲಹಾಸೂತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

1.11: ಭಿಕ್ಷಾಟನೆಯನ್ನು ಪ್ರೋತ್ಸಾಹಿಸಬಾರದು. ಆರೋಗ್ಯವಂತರು ಭಿಕ್ಷಾಟನೆ ಮಾಡುತ್ತಿದ್ದರೆ, ಅವರು ಅದನ್ನು ತೊರೆದು ಕೆಲಸ ಮಾಡಿ ಬದುಕಲು ಉತ್ತೇಜಿಸಬೇಕು, ಅಂಗವಿಕಲರಿಗೆ ಸರ್ಕಾರ ನೆರವು ನೀಡಬೇಕು ಎಂದು ಬಿಜೆಪಿ ಸದಸ್ಯ ಶವೈತ್ ಮಲಿಕ್ ಹೇಳಿದ್ದಾರೆ.

1.00: 2 ಗಂಟೆಯವರೆಗೆ ಕಲಾಪ ಮುಂದೂಡಿಕೆ

1.01:  ಏಪ್ರಿಲ್ 1, 2014ಕ್ಕಿಂತ ಮುಂಚೆ ನೀಡಿದ ಸಾಲಗಳಲ್ಲಿ  ವಸೂಲಾಗದ ಸಾಲದ ಪ್ರಮಾಣ ಜಾಸ್ತಿ ಇದೆ- ಜೇಟ್ಲಿ

12.50: 2010- 2013ರಲ್ಲಿ 471 ಉಗ್ರರನ್ನು ಹತ್ಯೆ ಮಾಡಲಾಗಿದ್ದು  2014ರಲ್ಲಿ  580 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು  ಪುಲ್ವಾಮಾದಲ್ಲಿ  ಸಿಆರ್‍‍ಪಿಎಫ್ ಶಿಬಿರದ ಮೇಲೆ ನಡೆದ ದಾಳಿ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಹನ್ಸ್‍ರಾಜ್ ಅಖಿರ್ ಹೇಳಿದ್ದಾರೆ.

ಮಧ್ಯಾಹ್ನ 12.40: ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ), ಬ್ಯಾಂಕ್ ಸಾಲ, ಸಾಲ ಮನ್ನಾ, ಪನಾಮಾ ಪೇಪರ್ಸ್ ,  ಪ್ಯಾರಡೈಸ್ ಪೇಪರ್ಸ್ ಪ್ರಕರಣ ಸೇರಿದಂತೆ ವಿವಿಧ ವಿತ್ತೀಯ ಸಮಸ್ಯೆಗಳ ಬಗೆಗಿನ ಪ್ರಶ್ನೆಗಳಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಉತ್ತರಿಸಿದ್ದಾರೆ.

12.27:  ನಿಧನರಾದ ವ್ಯಕ್ತಿಗಳಿಗೆ ಸಂತಾಪ ಸೂಚಿಸುವಾಗ ಸದಸ್ಯರು ಪರಸ್ಪರ ಮಾತನಾಡುತ್ತಿರುವುದು ಕಂಡು ಬಂತು.ರಾಜ್ಯಸಭಾ ಸದಸ್ಯರ ಈ ನಡೆ ಸರಿಯಲ್ಲ ಎಂದು ಹೇಳಿದ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು

12.22:  ಮಸೂದೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸ್ಥಾಯಿ ಸಮಿತಿಗೆ ಕಳುಹಿಸುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ರಾಜ್ಯಸಭೆಯಲ್ಲಿ ಈ ವಿಷಯ ಬಂದಾಗ, ಮಸೂದೆಗಳನ್ನು ಆಯ್ದ ಸಮಿತಿಗಳಿಗೆ ಕಳುಹಿಸಬೇಕೆಂದು ನಾವು ಒತ್ತಾಯಿಸುತ್ತೇವೆ: ಡಿ. ರಾಜಾ

12.20:  ಈ ವಿಧೇಯಕವನ್ನು ಆಯ್ದ ಸಮಿತಿಯ ಪರಾಮರ್ಶೆಗೆ ಕಳುಹಿಸಬೇಕೆಂದು ಎಡಪಕ್ಷಗಳು ಒತ್ತಾಯಿಸಲಿವೆ. ಆದರೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಸಮಿತಿ ವ್ಯವಸ್ಥೆಯನ್ನು ಕಡೆಗಣಿಸುತ್ತಿದೆ: ಸಿಪಿಐ ನೇತಾರ ಡಿ. ರಾಜಾ

12.14:  ಭಾರತೀಯ ವೈದ್ಯಕೀಯ ಮಂಡಳಿಯ(ಎಂಸಿಐ) ಜಾಗದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪಿಸುವ ಮಸೂದೆಯ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ

12.13: ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಯಾದರೆ ವೈದ್ಯರಿಗೆ ಹೆಚ್ಚಿನ ಸೌಲಭ್ಯಗಳು ಒದಗಲಿವೆ: ನಡ್ಡಾ

12.12:  ವೈದ್ಯರ ಮುಷ್ಕರ ನಿಲ್ಲಿಸಲು ಸರ್ಕಾರ ಮುಂದಾಗಬೇಕು: ವಿಪಕ್ಷ ನೇತಾರ ಗುಲಾಂ ನಬಿ ಆಜಾದ್

12.10: ವೈದ್ಯರ ಮುಷ್ಕರದಿಂದಾಗಿ ಹಲವಾರು ರೋಗಿಗಗಳು ಸಾವಿಗೀಡಾಗಿದ್ದಾರೆ: ಸಮಾಜವಾದಿ ಪಕ್ಷದ ಸದಸ್ಯ ನರೇಶ್ ಅಗ್ರವಾಲ್

12.01: ಕಾಂಗ್ರೆಸ್ ಒಂದು ಹೆಜ್ಜೆ ಮುಂದಿಟ್ಟರೆ 10 ಹೆಜ್ಜೆ ಹಿಂದಿಡುತ್ತದೆ. ತ್ರಿವಳಿ ತಲಾಖ್ ಬಗ್ಗೆ ಕಾಂಗ್ರೆಸ್ ಗಲಿಬಿಲಿಗೊಂಡಿದೆ. ಮುಸ್ಲಿಂ ಮಹಿಳೆಯರು ಖುಷಿಯಾಗಿದ್ದಾರೆ, ಆದರೆ ಕಾಂಗ್ರೆಸ್ ಯಾಕೆ ಬೇಸರಗೊಂಡಿದೆ ಎಂದು ತಿಳಿಯುತ್ತಿಲ್ಲ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್‌ ನಖ್ವಿ.

11.30:  ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಹೆಚ್ಚುತ್ತಿದ್ದು ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು: ಕಾಂಗ್ರೆಸ್ ಸದಸ್ಯೆ ಕುಮಾರಿ ಸೆಲ್ಜಾ

10.42: ತ್ರಿವಳಿ ತಲಾಖ್ ಮಸೂದೆಯನ್ನು ಆಯ್ದ ಸಮಿತಿಯ ಪರಾಮರ್ಶೆಗೊಳಪಡಿಸಬೇಕು- ಡಿಎಂಕೆ ಸಂಸದೆ ಕನ್ನಿಮೊಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.