‘ಐಪಿಒ’ನತ್ತ ವಿಮೆ ಕಂಪೆನಿಗಳ ಚಿತ್ತ

7
ಲಕ ಬಂಡವಾಳ ಸಂಗ್ರಹಕ್ಕೆ ಆದ್ಯತೆ * 2018ರಲ್ಲಿ ವಿಮೆ ಉದ್ಯಮದ ಉತ್ತಮ ಬೆಳವಣಿಗೆ ನಿರೀಕ್ಷೆ

‘ಐಪಿಒ’ನತ್ತ ವಿಮೆ ಕಂಪೆನಿಗಳ ಚಿತ್ತ

Published:
Updated:

ವಿಮೆ ಕಂಪೆನಿಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಬಂಡವಾಳ ಸಂಗ್ರಹಕ್ಕೆ ಆದ್ಯತೆ ನೀಡುತ್ತಿವೆ. 2017ರಲ್ಲಿ ಐದು ಕಂಪೆನಿಗಳು ಯಶಸ್ವಿಯಾಗಿ ಷೇರುಪೇಟೆ ಪ್ರವೇಶಿಸಿವೆ. ಇವುಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಷೇರುಪೇಟೆ ಪ್ರವೇಶ ಪಡೆದಿದ್ದು, ₹ 43,424 ಕೊಟಿ ಬಂಡವಾಳ ಸಂಗ್ರಹಿಸಿವೆ. ಇದು ಉಳಿದ ವಿಮೆ ಕಂಪೆನಿಗಳಿಗೂ ಉತ್ತೇಜನ ನೀಡಿದ್ದು, 2018ರಲ್ಲಿ ಇನ್ನಷ್ಟು ಕಂಪೆನಿಗಳು ಷೇರುಪೇಟೆ ಪ್ರವೇಶಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಉದ್ಯಮ ವಲಯದ ತಜ್ಞರು.

‘ವಿಮೆ ಸಂಸ್ಥೆಗಳು ಸದ್ಯಕ್ಕೆ ಆರ್ಥಿಕ ಬಲವರ್ಧನೆ ಹಾದಿಯಲ್ಲಿದ್ದು, ಮುಂದಿನ ದಿನಗಳಲ್ಲಿಯೂ ಇದೇ ಹಾದಿಯಲ್ಲಿ ಸಾಗುವ ನಿರೀಕ್ಷೆ ಇದೆ. ಗ್ರಾಹಕರಿಗೆ ಮತ್ತು ಪಾಲುದಾರರಿಗೆ  ಉತ್ತಮ ಸೇವೆ ಒದಗಿಸಲು ಸಾಧ್ಯವಾಗಲಿದೆ’ ಎನ್ನುವುದು ಬಜಾಜ್‌ ಅಲಯನ್ಸ್‌ ಜನರಲ್‌ ಇನ್ಶುರನ್ಸ್‌ ಕಂಪೆನಿಯ ಸಿಇಒ ತಪನ್‌ ಸಿಂಘೇಲ್ ಅವರ ಅಭಿಪ್ರಾಯವಾಗಿದೆ.

ವಿಮೆ ವಲಯ ವೇಗವಾಗಿ ಪ್ರಗತಿ ಕಾಣುತ್ತಿದೆ. ಅದರಲ್ಲೂ ಆರೋಗ್ಯ ವಿಮೆ ವಲಯಕ್ಕೆ ಬೇಡಿಕೆ ಹೆಚ್ಚಿದೆ. ‘ಉದ್ಯಮ ಬೆಳೆದಂತೆಲ್ಲಾ ಹೊಸ ಕಂಪೆನಿಗಳು ಹೊಸ ಯೋಜನೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತವೆ. ಇದರಿಂದ ಮಾರುಕಟ್ಟೆಯಲ್ಲಿ ಆರೋಗ್ಯಕರ ಪೈಪೋಟಿ ನಡೆಯಲಿದೆ’ ಎಂದು ಅಪೋಲೊ ಮನಿಚ್‌ ಹೆಲ್ತ್‌ ಇನ್ಶುರನ್ಸ್‌ ಸಿಇಒ ಆ್ಯಂಟನಿ ಜಾಕೋಬ್‌ ಹೇಳುತ್ತಾರೆ.

ಸರ್ಕಾರಿ ಸ್ವಾಮ್ಯದ ನ್ಯಾಷನಲ್‌ ಇನ್ಶುರನ್ಸ್‌ ಕಂಪೆನಿ, ಓರಿಯಂಟಲ್‌ ಇನ್ಶುರನ್ಸ್‌ ಕಂಪೆನಿ ಮತ್ತು ಯುನೈಟೆಡ್‌ ಇಂಡಿಯಾ ಇನ್ಶುರನ್ಸ್ ಕಂಪೆನಿಗಳೂ ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಲು ಸಿದ್ಧತೆ ನಡೆಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry