ಗದಗ: ಗದಗ–ರೋಣ ರಸ್ತೆಯ ಗದ್ದಿ ಹಳ್ಳದ ಸಮೀಪ ಮಂಗಳವಾರ ಸಂಜೆ ಟ್ರ್ಯಾಕ್ಟರ್ ಟ್ರೇಲರ್ ಉರುಳಿ ಬಿದ್ದು ಮೂರು ಮಂದಿ ಮೃತಪಟ್ಟಿದ್ದಾರೆ.

ಗದಗ ತಾಲ್ಲೂಕಿನ ಕೋಟುಮಚಗಿ ಗ್ರಾಮದ ನಿವಾಸಿಗಳಾದ ದಂಪತಿ ಶೇಖಪ್ಪ ಕರಡಿ (57) ಶಾಂತವ್ವ ಕರಡಿ (49) ಮತ್ತು ಮುದಕಪ್ಪ ಮುಧೋಳ(57) ಮೃತರು.

ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದ ಟ್ರಾಕ್ಟರ್, ಕಬ್ಬಿಣದ ಸರಳು ಹೇರಿಕೊಂಡು ಗದುಗಿನಿಂದ ಕೊಟುಮಚಗಿ ಮಾರ್ಗವಾಗಿ ಜಕ್ಕಲಿ ಗ್ರಾಮಕ್ಕೆ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಟ್ರೇಲರ್‌ನಲ್ಲಿ ಕುಳಿತು 8 ಮಂದಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಗದ್ದಿ ಹಳ್ಳದ ಸಮೀಪ ಬಂದಾಗ ಟ್ರ್ಯಾಕ್ಟರ್‌ನಿಂದ ಕೊಂಡಿ ಕಳಚಿಕೊಂಡು ಟ್ರೇಲರ್ ರಸ್ತೆಗೆ ಉರುಳಿದೆ. ಬಿದ್ದ ರಭಸಕ್ಕೆ ತಲೆ ರಸ್ತೆಗೆ ಬಡಿದು ಟ್ರ್ಯಾಕ್ಟರ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ತೀವ್ರವಾಗಿ ಗಾಯಗೊಂಡ ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಗದಗ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.