ಕೋಲ್ಕತ್ತ: ತವರಿನಲ್ಲಿ ಜಯದ ಓಟ ಮುಂದುವರಿಸುವ ವಿಶ್ವಾಸದಲ್ಲಿರುವ ಹಾಲಿ ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕತ್ತ (ಎಟಿಕೆ) ತಂಡ ಬುಧವಾರದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಪಂದ್ಯದಲ್ಲಿ ಎಫ್ಸಿ ಗೋವಾ ಎದುರು ಆಡಲಿದೆ.

ಐಎಸ್ಎಲ್ ಟೂರ್ನಿಯಲ್ಲಿ ಯಶಸ್ವಿ ತಂಡ ಎನಿಸಿಕೊಂಡಿದ್ದ ಎಟಿಕೆ ಈ ಋತುವಿನಲ್ಲಿ ಆರಂಭದ ನಾಲ್ಕು ಪಂದ್ಯಗಳನ್ನು ಸತತವಾಗಿ ಸೋತಿತ್ತು. ಬಳಿಕ ಮುಂಬೈ ಸಿಟಿ ಹಾಗೂ ಡೆಲ್ಲಿ ಡೈನಮೋಸ್ ತಂಡಗಳನ್ನು ಮಣಿಸಿದೆ.

ಎರಡು ಬಾರಿ ಚಾಂಪಿಯನ್ ಆಗಿರುವ ಎಟಿಕೆ ತಂಡ ಈ ಋತುವಿನಲ್ಲಿ ಆಡಿದ ಆರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಎಂಟು ಪಾಯಿಂಟ್ಸ್ಗಳಿಂದ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ತವರಿನ ಸಾಲ್ಟ್ಲೇಕ್ ಕ್ರೀಡಾಂಗಣದಲ್ಲಿ ಎಟಿಕೆ ತಂಡ ಎಫ್ಸಿ ಗೋವಾ ತಂಡದ ಸವಾಲನ್ನು ಮೀರಲು ಸಜ್ಜು ಗೊಂಡಿದೆ. ಇಲ್ಲಿ ಹಿಂದೆ ಆಡಿದ ಒಂದು ಪಂದ್ಯವನ್ನು ಗೆದ್ದಿರುವ ರೂಬಿ ಕೆನೆ ಬಳಗ ಮತ್ತೊಮ್ಮೆ ಇಲ್ಲಿ ಮಿಂಚುವ ವಿಶ್ವಾಸ ಹೊಂದಿದೆ. ಎಫ್ಸಿ ಗೋವಾ ತಂಡ ಕೂಡ ಪ್ರಬಲವಾಗಿದೆ. ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ದಾಖಲಿಸಿದೆ. 12 ಪಾಯಿಂಟ್ಸ್ ಗಳಿಂದ ಪಟ್ಟಿಯಲ್ಲಿ ಐದನೇ ಸ್ಥಾನ ದಲ್ಲಿದೆ.

ಹಿಂದಿನ ಪಂದ್ಯದಲ್ಲಿ ಗೋವಾ ತಂಡ ಎಫ್ಸಿ ಪುಣೆ ಸಿಟಿ ಎದುರು ಸೋತಿದೆ. ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ ಗೋವಾ ತಂಡ 5–1 ಗೋಲುಗಳ ಅಂತರದಲ್ಲಿ ಗೆದ್ದಿತ್ತು. ಈ ತಂಡದ ರಕ್ಷಣಾ ಪಡೆ ಬಲಿಷ್ಠವಾಗಿದೆ.

ಆಕ್ರಮಣಕಾರಿಯಾಗಿ ಆಡುವ ಎಟಿಕೆ ತಂಡದ ಗೋಲುಗಳನ್ನು ತಡೆ ಯಲು ಗೋವಾ ಸಜ್ಜುಗೊಂಡಿದೆ.

‘ಎಟಿಕೆ ತಂಡವನ್ನು ತಡೆಯಲು ಯೋಜನೆ ರೂಪಿಸಿದ್ದೇವೆ. ಉತ್ತಮ ತಂಡದ ಎದುರು ಆಟದ ಗುಣಮಟ್ಟ ಹೆಚ್ಚಿದರೆ ಮಾತ್ರ ಗೆಲ್ಲಲು ಸಾಧ್ಯ. ತವರಿನಲ್ಲಿ ಆಡುತ್ತಿರುವ ತಂಡವನ್ನು ಕಟ್ಟಿಹಾಕಲು ನಮ್ಮ ಆಟದ ವೇಗವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಗೋವಾ ತಂಡದ ಕೋಚ್ ಸರ್ಜಿಯೊ ಲೊಬೇರಾ ಹೇಳಿದ್ದಾರೆ.

‘ಹಿಂದಿನ ಸೋಲುಗಳಲ್ಲಿ ಕಲಿತ ಪಾಠ ನಮ್ಮ ನೆರವಿಗೆ ಬರಲಿದೆ. ಸೋಲುನ್ನು ಮರೆತು ಆಡಬೇಕು. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವ ಜಾಣ್ಮೆ ತಂಡದ ಆಟಗಾರರಲ್ಲಿ ಇದೆ. ಆದ್ದರಿಂದ ಜಯದ ವಿಶ್ವಾಸ ಕೂಡ ಹೆಚ್ಚಿದೆ’ ಎಂದು ಲೊಬೇರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.