ಮಂಗಳವಾರ, ಆಗಸ್ಟ್ 4, 2020
22 °C

ನಟಿ ಪಾರ್ವತಿ ಮೆನನ್‌ ವಿರುದ್ಧ ನಿಲ್ಲದ ಆನ್‌ಲೈನ್‌ ಸಮರ

ಪಿಟಿಐ Updated:

ಅಕ್ಷರ ಗಾತ್ರ : | |

ನಟಿ ಪಾರ್ವತಿ ಮೆನನ್‌ ವಿರುದ್ಧ ನಿಲ್ಲದ ಆನ್‌ಲೈನ್‌ ಸಮರ

ತಿರುವನಂತಪುರ: ಚಲನಚಿತ್ರಗಳಲ್ಲಿ ಮಹಿಳೆಯರ ವಿರುದ್ಧದ ಸಂಭಾಷಣೆಗಳ ವಿರುದ್ಧ ಧ್ವನಿ ಎತ್ತಿದ ಮಲಯಾಳ ನಟಿ ಪಾರ್ವತಿ ಮೆನನ್‌ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ದಾಳಿಗಳು ಮತ್ತಷ್ಟು ತೀವ್ರಗೊಂಡಿವೆ.

ಪಾರ್ವತಿ ನಾಯಕಿಯಾಗಿ ನಟಿಸಿರುವ ‘ಮೈ ಸ್ಟೋರಿ’ ಮಲಯಾಳ ಚಿತ್ರದ ಹಾಡು ಭಾನುವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಅದರ ವಿರುದ್ಧ ಆಂದೋಲನ ಶುರುವಾಗಿದೆ.

ನಟಿಯನ್ನು ನಿಂದಿಸುವ ದ್ವೇಷಕಾರಕ ಸಂದೇಶ ಹರಿದಾಡುತ್ತಿವೆ. 5.5 ಲಕ್ಷ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ. ಆ ಪೈಕಿ 18 ಸಾವಿರ ‘ಲೈಕ್‌’ ಮಾಡಿದ್ದು, 66 ಸಾವಿರ ಜನರು ‘ಡಿಸ್‌ಲೈಕ್‌’ ಮಾಡಿದ್ದಾರೆ.

ಸಿನಿಮಾವೊಂದರಲ್ಲಿ ಮಲಯಾಳ ಖ್ಯಾತ ನಾಯಕ ನಟನಿಂದ ಸ್ತ್ರೀದ್ವೇಷಿ ಸಂಭಾಷಣೆ ಹೇಳಿಸಿದ್ದು ಒಳ್ಳೆಯ ಅಭಿರುಚಿ ಅಲ್ಲ ಎಂದು ಪಾರ್ವತಿ ಕೇರಳದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಸಮಾಧಾನ ಹೊರಹಾಕಿದ್ದರು.

ಅದರ ಬೆನ್ನಲ್ಲೇ ನಟಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ನಿಂದನೆ, ವಾಗ್ದಾಳಿ ಆರಂಭವಾಗಿದ್ದವು. ನಟಿ ಪಾರ್ವತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.