16 ಜಿಲ್ಲೆಗಳಿಗೆ ₹ 12,086 ಕೋಟಿ ಯೋಜನೆಗಳು

7
ಯಾತ್ರೆಯಲ್ಲಿ ಹಳೆಯ, ಪ್ರಕಟಿತ ಯೋಜನೆಗಳಿಗೇ ಸಿಎಂ ಚಾಲನೆ

16 ಜಿಲ್ಲೆಗಳಿಗೆ ₹ 12,086 ಕೋಟಿ ಯೋಜನೆಗಳು

Published:
Updated:

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನವ ಕರ್ನಾಟಕ ನಿರ್ಮಾಣ’ದ ಹೆಸರಿನಲ್ಲಿ 16 ಜಿಲ್ಲೆಗಳ 43 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಪ್ರವಾಸದ ಸಂದರ್ಭದಲ್ಲಿ ಭರಪೂರ ಉಡುಗೊರೆಗಳನ್ನು ಪ್ರಕಟಿಸಿದ್ದಾರೆ.

ಅದರ ಒಟ್ಟು ಮೊತ್ತ  ₹ 12,086 ಕೋಟಿ. ಇವುಗಳಲ್ಲಿ ಕೆಲವು ಹಳೆಯ ಯೋಜನೆಗಳು, ಇನ್ನು ಕೆಲವು ಈಗಾಗಲೇ ಪೂರ್ಣಗೊಂಡವು. ಮತ್ತೆ ಕೆಲವು ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿದ್ದ ಯೋಜನೆಗಳು.

ಡಿಸೆಂಬರ್‌ 13 ರಿಂದ ಆರಂಭಿಸಿದ ಮೊದಲ ಹಂತದ ಪ್ರವಾಸ ಡಿಸೆಂಬರ್‌ 30 ಕ್ಕೆ ಮುಗಿಯಿತು. ಈ ಸಂದರ್ಭದಲ್ಲಿ ಅವರು ಭೇಟಿ ನೀಡಿದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿದರು. ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರಕಟಿಸಿದ್ದ ಯೋಜನೆ

ಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ದಾವಣಗೆರೆಯಲ್ಲಿ ₹ 1,728 ಕೋಟಿ ಯೋಜನೆಗಳಿಗೆ ಚಾಲನೆ ನೀಡಲಾಯಿತು. ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿಯ 60 ಕೆರೆಗಳಿಗೆ ತುಂಗಭ್ರದಾ ನದಿ

ಯಿಂದ  ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.  ಗರ್ಭಗುಡಿ ಏತ ನೀರಾವರಿ ಯೋಜನೆಯನ್ನು 2011 ರಲ್ಲಿಯೇ ಪ್ರಕಟಿಸಲಾಗಿತ್ತು. 2017–18 ರ ಮುಂಗಡ ಪತ್ರದಲ್ಲಿ ಇದನ್ನೇ ಹೊಸ ಯೋಜನೆ ಎಂದು ಪ್ರಕಟಿಸಲಾಯಿತು.  ತುಂಗಾ ಎಡ ಮತ್ತು ಬಲ ದಂಡೆ ನಾಲೆ ಆಧುನೀಕರಣ ಯೋಜನೆಗೆ 2012 ರಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದಕ್ಕೆ ಈಗ ಶಂಕು ಸ್ಥಾಪನೆ ನೆರವೇರಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ನೀರಾವರಿ ಯೋಜನೆಗೆ ₹ 1,730 ಕೋಟಿ ಯೋಜನೆ ಪ್ರಕಟಿಸಿದ್ದಾರೆ. ಇದರಡಿ 11,221 ಕೆರೆಗಳನ್ನು ನಿರ್ಮಿಸಿ 21,278 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸಲಾಗುತ್ತದೆ. ಇದರಿಂದ 17,000 ರೈತರಿಗೆ ಅನುಕೂಲವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಒಂದು ಆಸ್ಪತ್ರೆ, ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯ ನಾಲ್ಕನೇ ಹಂತ, ಕಾರಂಜಾ ನದಿಯಿಂದ 23 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆ. ಹೀಗೆ ಬೀದರ್‌ ಜಿಲ್ಲೆಗೆ ₹ 1,201 ಕೋಟಿ ಯೋಜನೆ ಪ್ರಕಟಿಸಿ

ದ್ದಾರೆ.  ‘ಈ ಎಲ್ಲ ಯೋಜನೆಗಳಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಒಪ್ಪಿಗೆ ಸಿಕ್ಕಿದೆ. ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿರುವ ಯೋಜನೆಗಳನ್ನು ಮಾರ್ಚ್‌ ಒಳಗೆ ಪೂರ್ಣಗೊಳಿಸಲೂ ಸೂಚನೆ ನೀಡಲಾಗಿದೆ’ ಎಂದು ಬೀದರ್‌ ಜಿಲ್ಲಾಧಿಕಾರಿ ಎಚ್‌.ಮಹದೇವ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry