ಸಮಯ ಪಾಲನೆಗೆ ಅಧಿಕಾರಿಗಳಿಗೆ ತಾಕೀತು

7

ಸಮಯ ಪಾಲನೆಗೆ ಅಧಿಕಾರಿಗಳಿಗೆ ತಾಕೀತು

Published:
Updated:

ಹೊಸಪೇಟೆ: ಜನಸ್ಪಂದನ ಸಭೆಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಉಪ ವಿಭಾಗಧಿಕಾರಿ ಗರ್ಗ್‌ ಜೈನ್‌ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು. ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆದ 2ನೇ ಜನಸ್ಪಂದನ ಸಭೆಯಲ್ಲಿ ಮಾತನಾಡಿದರು.

ಸಾರ್ವಜನಿಕರ ಕೆಲಸಗಳನ್ನುತ್ವರಿತಗತಿಯಲ್ಲಿ ಮಾಡಿ ಕೊಡಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ತಹಶೀಲ್ದಾರ್ ವಿಶ್ವನಾಥ ಅವರಿಂದ ವಿವಿಧ ಇಲಾಖೆಗಳ ಮಾಹಿತಿ ಪಡೆದರು. ಸಭೆಗೆ ಬರದ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಶಿ ಅವರನ್ನು ದೂರ ವಾಣಿ ಮೂಲಕ ಕರೆಯಿಸಿದರು, ವಿಳಂಬಕ್ಕೆ ಕಾರಣ ನೀಡುವಂತೆ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಟಿ.ವೆಂಕೋಬಪ್ಪ, ನಗರಸಭೆ ಪೌರಾಯುಕ್ತ ವಿ.ರಮೇಶ್, ಉಪ ತಹಶೀಲ್ದಾರ್ ರೇಣುಕಮ್ಮ, ಶಿಶು ಅಭಿವೃದ್ಧಿ ಅಧಿಕಾರಿ ಪ್ರಭಾಕರ, ಸಹಾಯಕ

ಕೃಷಿ ನಿರ್ದೇಶಕ ಮಂಜುನಾಥ ಕನ್ನಾರಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಾಜೇಂದ್ರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಿಶೋರ್ ಕುಮಾರ್, ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿ ಎರ್ರಿಸ್ವಾಮಿ, ಆರೋಗ್ಯ ಇಲಾಖೆಯ ಧರ್ಮನಗೌಡ, ದೊಡ್ಡಮನಿ, ಕಮಲಾಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫಣಿರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry