ಮೈಸೂರು: ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕತ್ತುಹಿಸುಕಿ ಕೊಲೆ ಮಾಡಿದ ಸದ್ದಾಂ ಹುಸೇನ್ (30) ಎಂಬಾತನಿಗೆ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬುಧವಾರ ಆದೇಶ ನೀಡಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಪೋಷಕರು ಮಗುವಿನ ಆರೈಕೆಯ ಹೊಣೆಯನ್ನು ಹುಸೇನ್ಗೆ ವಹಿಸಿದ್ದರು. ಬೆಂಗಳೂರು– ಮೈಸೂರು ರಸ್ತೆಯ ಕಂಟ್ರಿ ಕ್ಲಬ್ ಹಿಂಭಾಗದ ಗುಡಿಸಲಿನಲ್ಲಿ 2015ರ ಅ.30ರಂದು ಮಗು ಕೊಲೆಯಾಗಿತ್ತು. ಅನುಮಾನ ವ್ಯಕ್ತಪಡಿಸಿದ ಪೋಷಕರು ಮೇಟಗಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

‘ಮಗುವಿನ ಮೈಮೇಲೆ ಗಾಯಗಳಾಗಿದ್ದವು. ಗುಪ್ತಾಂಗದಲ್ಲಿ ರಕ್ತ ವಸರುತಿತ್ತು. ಇದನ್ನು ಗಮನಿಸಿದ ನೆರೆಹೊರೆಯವರು ಮಗುವಿನ ತಂದೆಗೆ ಮಾಹಿತಿ ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಕ್ಸೊ) ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ನಡೆದಿರುವುದನ್ನು ವೈದ್ಯಕೀಯ ವರದಿ ದೃಢಪಡಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಎಂ.ಪಾವಲೆ ಈ ಆದೇಶ ನೀಡಿದ್ದಾರೆ’ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಸಿ.ಶಿವರುದ್ರಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.