‘ಇನ್ಫೊಸಿಸ್‌ ಪುನರ್‌ರಚನೆ ಮಾಡಿ’

5

‘ಇನ್ಫೊಸಿಸ್‌ ಪುನರ್‌ರಚನೆ ಮಾಡಿ’

Published:
Updated:
‘ಇನ್ಫೊಸಿಸ್‌ ಪುನರ್‌ರಚನೆ ಮಾಡಿ’

ಹೈದರಾಬಾದ್‌: ಇನ್ಫೊಸಿಸ್‌ ಆಡಳಿತ ಮಂಡಳಿ ಪುನರ್‌ರಚನೆ ಮಾಡುವಂತೆ ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ವಿ. ಬಾಲಕೃಷ್ಣನ್‌ ಅವರು ಮತ್ತೊಮ್ಮೆ ಒತ್ತಾಯಿಸಿದ್ದಾರೆ.

ಕಾರ್ಪೊರೇಟ್‌ ನಿಯಮ ಪಾಲನೆಯಲ್ಲಿ ಲೋಪ ಎಸಗಿರುವುದಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದೇಶಕರನ್ನು ಕೈಬಿಡುವಂತೆ ಡಿಸೆಂಬರ್‌ 9ರಂದು ಬಾಲಕೃಷ್ಣನ್‌ ಅವರು ಸಂಸ್ಥೆಯನ್ನು ಒತ್ತಾಯಿಸಿದ್ದರು. ಇದೀಗ ಸಲೀಲ್‌ ಪಾರೇಖ್‌ ಅವರು ಸಿಇಒ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಮತ್ತೊಮ್ಮೆ ಆಡಳಿತ ಮಂಡಳಿ ಪುನರ್‌ರಚನೆಯ ಬೇಡಿಕೆ ಇಟ್ಟಿದ್ದಾರೆ.

‘ನಂದನ್‌ ನಿಲೇಕಣಿ ಅವರು ಆದಷ್ಟೂ ಬೇಗ ಆಡಳಿತ ಮಂಡಳಿಯ ಪುನರ್‌ರಚನೆ ಮಾಡಬೇಕಿದೆ. ಮುಖ್ಯವಾಗಿ ಮಾಜಿ ಸಹ ಅಧ್ಯಕ್ಷ ರವಿ ವೆಂಕಟೇಶನ್ ಮತ್ತು ಲೆಕ್ಕಪತ್ರ ಸಮಿತಿ ಅಧ್ಯಕ್ಷೆ ರೂಪಾ ಕುಡ್ವಾ ಅವರನ್ನು ಕೈಬಿಡಬೇಕು. ಆ ಮೂಲಕ ಹೊಸ ಸಿಇಒ ಪಾರೇಖ್‌ ಅವರಿಗೆ ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು’ ಎಂದು ಬಾಲಕೃಷ್ಣನ್‌ ತಿಳಿಸಿದ್ದಾರೆ.

‘ಸಂಸ್ಥೆಯ ಮಾಜಿ ಸಿಎಫ್‌ಒ ರಾಜೀವ್‌ ಬನ್ಸಲ್‌ ಅವರಿಗೆ ಗುತ್ತಿಗೆ ಒಪ್ಪಂದ ರದ್ದತಿ ಅನ್ವಯ ನೀಡಿದ ಗರಿಷ್ಠ ಪರಿಹಾರ ನೀಡಿಕೆಯಲ್ಲಿ ನಿಯಮಾವಳಿ ಉಲ್ಲಂಘಿಸಿದ ಪ್ರಕರಣ ಇತ್ಯಥ್ಯಕ್ಕೆ ಸಂಸ್ಥೆಯು ಷೇರು ನಿಯಂತ್ರಣ ಮಂಡಳಿಯ (ಸೆಬಿ) ಮೊರೆ ಹೋಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ‘ಆಡಳಿತ ಮಂಡಳಿಗೆ ವಿಶಾಲದೃಷ್ಟಿಕೋನ ಇರುವವರನ್ನು ನೇಮಿಸುವ ಅಗತ್ಯವಿದೆ’ ಎಂದು ಸಲಹೆಯನ್ನೂ ನೀಡಿದ್ದಾರೆ.

‘ಉತ್ತಮ ಹಿನ್ನೆಲೆಯಿಂದ ಬಂದಿರುವ ಪಾರೇಖ್‌ ಅವರಿಗೆ ಸಂಸ್ಥೆಯಲ್ಲಿ ಹೊಸತನ ತರುವ ಸದಾವಕಾಶ ಒದಗಿಬಂದಿದೆ’ ಎಂದು ಬಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry