ಬೆಂಗಳೂರು: ಶ್ರವಣಬೆಳಗೊಳದ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಸವಿನೆನಪಿಗಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿ ರೂಪಿಸಿರುವ ವಿಶೇಷ ಕ್ಯಾಲೆಂಡರ್ ಅನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಬುಧವಾರ ಬಿಡುಗಡೆ ಮಾಡಿದರು.

ಶ್ರವಣಬೆಳಗೊಳ ಮಠದ ಗೋಡೆಗಳಲ್ಲಿರುವ ಭಿತ್ತಿಚಿತ್ರಗಳ ಪ್ರತಿಕೃತಿಗಳನ್ನು ಕ್ಯಾಲೆಂಡರ್‌ನಲ್ಲಿ ಮುದ್ರಿಸಲಾಗಿದೆ.

‘ಲಲಿತ ಕಲಾ ಅಕಾಡೆಮಿಯು 1971ರಲ್ಲಿ ಅಲ್ಲಿ ಕಲಾ ಶಿಬಿರ ಹಮ್ಮಿಕೊಂಡಿತ್ತು. ಆಗ 11 ಕಲಾವಿದರು ಅಲ್ಲಿನ ಗೋಡೆಗಳಲ್ಲಿರುವ ಭಿತ್ತಿಚಿತ್ರಗಳನ್ನು ನೋಡಿ 100 ಚಿತ್ರಗಳನ್ನು ಬಿಡಿಸಿದ್ದರು. ಅವುಗಳಲ್ಲಿ 12 ಚಿತ್ರಗಳನ್ನು ಆರಿಸಿ ಕ್ಯಾಲೆಂಡರ್‌ಗೆ ಬಳಸಿಕೊಂಡಿದ್ದೇವೆ’ ಎಂದು ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ತಿಳಿಸಿದರು.

ಶಿಬಿರದಲ್ಲಿ ಕಲಾವಿದರು ಬಿಡಿಸಿದ್ದ ಎಲ್ಲ ಚಿತ್ರಗಳನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶಿಸುತ್ತೇವೆ ಎಂದರು.

‘ಕ್ಯಾಲೆಂಡರ್‌ನ 1,000 ಪ್ರತಿಗಳನ್ನು ಮುದ್ರಿಸಿದ್ದೇವೆ. ಇದರ ದರ ₹85. ಇದೇ 7ರಿಂದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಇವುಗಳನ್ನು ಮಾರಾಟಕ್ಕೆ ಇಡುತ್ತೇವೆ’ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಎಚ್.ವಿ ಇಂದ್ರಮ್ಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.