ಬ್ಲಾಸ್ಟರ್ಸ್‌ಗೆ ಡೇವಿಡ್‌ ಕೋಚ್‌

7

ಬ್ಲಾಸ್ಟರ್ಸ್‌ಗೆ ಡೇವಿಡ್‌ ಕೋಚ್‌

Published:
Updated:
ಬ್ಲಾಸ್ಟರ್ಸ್‌ಗೆ ಡೇವಿಡ್‌ ಕೋಚ್‌

ನವದೆಹಲಿ: ಇಂಗ್ಲೆಂಡ್‌ ತಂಡದ ಹಿರಿಯ ಗೋಲ್‌ಕೀಪರ್‌ ಡೇವಿಡ್‌ ಜೇಮ್ಸ್‌ ಅವರು ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುವ ಕೇರಳ ಬ್ಲಾಸ್ಟರ್ಸ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದಾರೆ.

ಕೇರಳ ತಂಡ ಈ ಬಾರಿಯ ಟೂರ್ನಿಯ ಇದುವರೆಗಿನ ಪಂದ್ಯಗಳಲ್ಲಿ ಪರಿಣಾಮಕಾರಿ ಆಟ ಆಡಲು ವಿಫಲವಾಗಿತ್ತು. ಹೀಗಾಗಿ ತಂಡದ ಕೋಚ್‌ ರೆನೆ ಮೆಯುಲೆನ್ಸ್‌ಟೀನ್‌ ಅವರನ್ನು ತೆಗೆದುಹಾಕಲಾಗಿತ್ತು.

ಜೇಮ್ಸ್‌ ಅವರು 1997ರಿಂದ 2010ರ ಅವಧಿಯಲ್ಲಿ ಇಂಗ್ಲೆಂಡ್‌ ಪರ ಒಟ್ಟು 53 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. ಐಎಸ್‌ಎಲ್‌ ಚೊಚ್ಚಲ ಆವೃತ್ತಿಯಲ್ಲಿ ಅವರು ತಂಡದ ಕೋಚ್‌ ಆಗಿದ್ದರು.

2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲೂ ಜೇಮ್ಸ್‌ ಆಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry