ಸೋಮವಾರ, ಜೂಲೈ 6, 2020
28 °C

ನಗದು, 1.19 ಕೆ.ಜಿ ಚಿನ್ನಾಭರಣ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್‌.ಟಿ.ನಗರದ ಸುಲ್ತಾನ್‌ಪಾಳ್ಯದ ಮುಖ್ಯರಸ್ತೆ ಬಳಿಯ ಕೃಷ್ಣಪ್ಪ ಎಂಬುವರ ಮನೆಗೆ ಹೊಸ ವರ್ಷದಂದು ನುಗ್ಗಿದ ದುಷ್ಕರ್ಮಿಗಳು, ಬೀರು

ವಿನಲ್ಲಿದ್ದ ₹10,000 ನಗದುಹಾಗೂ 1.19 ಕೆ.ಜಿ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ.

ಜ.1ರಂದು ಕುಟುಂಬಸ್ಥರ ಜತೆಗೆ ಅವರು ಮೈಸೂರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ತಿಳಿದ ಕಳ್ಳರು, ಹಿಂಬದಿ ಕಿಟಕಿಯ ಗ್ರಿಲ್ಸ್‌ ಕತ್ತರಿಸಿ ಒಳ ನುಗ್ಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ವಶಕ್ಕೆ ಪಡೆದಿ

ದ್ದೇವೆ. ಕಳ್ಳರ ಪತ್ತೆಗೆ ಪ್ರತ್ಯೇಕ ತಂಡ ರಚಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ಸೆಕ್ಯೂರಿಟಿ ಗಾರ್ಡ್‌ ಮೇಲೆ ಸಂಶಯ: ಮೈಸೂರಿಗೆ ಹೋಗುವ ನಿಮಿತ್ತ ಮನೆಯ ಕಾವಲಿಗೆಂದು ಎರಡು ದಿನಗಳ ಮಟ್ಟಿಗೆ ನೇಪಾಳದ ಗೋವಿಂದು (22) ಎಂಬಾತನನ್ನು ಕೃಷ್ಣಪ್ಪ ಕೆಲಸಕ್ಕೆ ಇಟ್ಟುಕೊಂಡಿದ್ದರು.

‘ಮನೆಗೆ ಹಿಂದಿರುಗಿದಾಗ ಆತ ನಾಪತ್ತೆಯಾಗಿದ್ದ. ಆತನ ಮೊಬೈಲ್ ಸಹ ಸ್ವಿಚ್ಡ್ ಆಫ್ ಆಗಿದೆ. ಹೀಗಾಗಿ, ಆತನೇ ಕಳ್ಳತನ ಮಾಡಿರಬಹುದು’ ಎಂದು ಕೃಷ್ಣಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.