ಸೋಮವಾರ, ಜುಲೈ 13, 2020
25 °C

ಶೇಂಗಾ ಬೆಳೆಗೆ ನೀರು ಹರಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೇಂಗಾ ಬೆಳೆಗೆ ನೀರು ಹರಿಸಲು ಒತ್ತಾಯ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ತಾಲ್ಲೂಕಿನ ಕಾಡಂಗೇರಾ ಗ್ರಾಮದಲ್ಲಿ ಬಿತ್ತನೆ ಮಾಡಿದ ಶೇಂಗಾ ಬೆಳೆಗೆ ಸಮರ್ಪಕವಾಗಿ ಕಾಲುವೆ ನೀರು ಬರುತ್ತಿಲ್ಲ. ಕೆಳ ಭಾಗದ ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ.

‘ಎರಡು ತಿಂಗಳ ಹಿಂದೆ ಪ್ರತಿ ಕ್ವಿಂಟಲ್‌ಗೆ ₹8000ದಂತೆ ಕಾಳು ತಂದು ಬಿತ್ತನೆ ಮಾಡಿದ್ದೇವೆ. ಸದ್ಯ ಶೇಂಗಾ ಬೆಳೆಯು ಹೂವಾಡುವ ಹಂತದಲ್ಲಿ ಇದೆ. ಆದರೆ ವಾರಬಂದಿ ನಿಯಮವನ್ನು ಜಾರಿ ಮಾಡಿದ್ದರಿಂದ ಮತ್ತು ಭತ್ತ ನಾಟಿ ಮಾಡಿ ಅಧಿಕ ನೀರನ್ನು ಸೆಳೆದುಕೊಳ್ಳುತ್ತಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎನ್ನುತ್ತಾರೆ ರೈತ ಮಾಳಪ್ಪ.

‘ಕಾಲುವೆ ಮೇಲ್ಭಾಗದಲ್ಲಿ ಕೆಲ ರೈತರು ಕಾಲುವೆ ಸೀಳಿ ಪೈಪ್‌ಲೈನ್‌ ಮೂಲಕ ಅನಧಿಕೃತವಾಗಿ ಕೆರೆ ನಿರ್ಮಿಸಿದ್ದಾರೆ. ಸಂಗ್ರಹಿಸಿದ ನೀರನ್ನು ವಾರಬಂದಿ ಸಮಯದಲ್ಲಿ ಕಾಲುವೆ ನೀರು ಸ್ಥಗಿತಗೊಂಡಾಗ ಹಾಯಿಸುತ್ತಾರೆ. ಇದರಿಂದ ನಮಗೆ ನೀರು ತಲುಪುತ್ತಿಲ್ಲ. ಕೃಷ್ಣಾ ಭಾಗ್ಯ ಜಲ ನಿಗಮದ ಭೀಮರಾಯನಗುಡಿ ವಲಯದ ಎಂಜಿನಿಯರ್‌ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಅನಧಿಕೃತವಾಗಿ ನಿರ್ಮಿಸಿದ ಕೆರೆಗಳನ್ನು ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ನೀರು ವಂಚಿತ ಕೆಳ ಭಾಗದ ಗ್ರಾಮಗಳಾದ ಮುನಮುಟಗಿ, ಕಾಡಂಗೇರಾ, ಹಯ್ಯಾಳ, ಮದರಕಲ್, ಕೊಳ್ಳೂರ, ಬಿರನೂರ, ಹತ್ತಿಗೂಡೂರ, ಅನವಾರ ಗ್ರಾಮದ ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.