ಶನಿವಾರ, ಜೂಲೈ 4, 2020
21 °C

ವಿದ್ಯುತ್ ನಿಲುಗಡೆ ಇಂದು, ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಸೆಸ್ಕ್‌’ ವ್ಯಾಪ್ತಿಯ ದಕ್ಷಿಣ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಇರುವ ಕಾರಣ, ಜ. 4ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್‌ ಪೂರೈಕೆ ಇರುವುದಿಲ್ಲ.

ವ್ಯಾಪ್ತಿಯ ಪ್ರದೇಶಗಳಾದ ಸೀತಾರಂಗ ಆಸ್ಪತ್ರೆ, ಲಕ್ಷ್ಮಿಪುರಂ, ಹೊಸಕೇರಿ, ಸುಣ್ಣದಕೇರಿ, ರೆಹಮಾನ್ ಮೊಹಲ್ಲಾ, ಜೈನ್ ಭವನ್, ಕಾಕಲವಾಡಿ, ಡಿ.ಸುಬ್ಬಯ್ಯ ರಸ್ತೆ, ದಿವಾನ್ಸ್ ರಸ್ತೆ, ಅಶೋಕಪುರಂ, ಕೃಷ್ಣಮೂರ್ತಿಪುರಂ, ಚಾಮರಾಜಪುರಂ, ಬಲ್ಲಾಳ್ ಸರ್ಕಲ್, ಚಾಮುಂಡಿಪುರಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ವಿದ್ಯುತ್ ನಿಲುಗಡೆ ನಾಳೆ

‘ಸೆಸ್ಕ್‌’ ವ್ಯಾಪ್ತಿಯ ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯದ ಅಂಗವಾಗಿ ಜ. 5ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್‌ ಸರಬರಾಜು ಇರುವುದಿಲ್ಲ.

ವ್ಯಾಪ್ತಿಯ ಪ್ರದೇಶಗಳಾದ ಹಲಗಯ್ಯನಹುಂಡಿ, ಹಾರೋಹಳ್ಳಿ, ನೀರಹಳ್ಳ, ಶಿವಪುರ, ವಾಜಮಂಗಲ ಗೇಟ್, ಭುಗತಹಳ್ಳಿ, ಚೋರನಹಳ್ಳಿ, ಚಿಕ್ಕಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಅಲ್ಲದೇ, ದಕ್ಷಿಣ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಇರುವ ಕಾರಣ, ಕೈಗಾರಿಕಾ  ಫೀಡರ್ ಮತ್ತು ಎನ್.ಜೆ.ವೈ. ಜ್ವಾಲಾಮುಖಿ ಫೀಡರ್‍ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್‌ ಪೂರೈಕೆ ಇರುವು‌ದಿಲ್ಲ.

ವ್ಯಾಪ್ತಿಯ ಪ್ರದೇಶಗಳಾದ ವಿದ್ಯಾರಣ್ಯಪುರಂ, ವಿಶ್ವೇಶ್ವರನಗರ, ಕೈಗಾರಿಕಾ ಸಬರ್ಬ್ 1ನೇ, 2ನೇ ಮತ್ತು 3ನೇ ಹಂತ, ವೀವರ್ಸ್ ಕಾಲೋನಿ, ಪೋಸ್ಟಲ್ ಕಾಲೋನಿ, ಸ್ಟರ್ಲಿಂಗ್ ಥಿಯೇಟರ್, ಬಂಡಿಪಾಳ್ಯ, ಹೊಸಹುಂಡಿ, ಗುಡುಮಾದನಹಳ್ಳಿ, ಏಳಿಗೆಹುಂಡಿ, ಉತ್ತನಹಳ್ಳಿ, ಗೆಜ್ಜಗಳ್ಳಿ, ಮಂಡಕಳ್ಳಿ, ಹಡಜನ, ಮಾರಿಶೆಟ್ಟಿಹಳ್ಳಿ, ಟಿ.ಎಂ.ಹುಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.