ಸದ್ಯದಲ್ಲೇ ತೆರೆಗೆ ‘ಹೆಬ್ಬೆಟ್ ರಾಮಕ್ಕ’

7

ಸದ್ಯದಲ್ಲೇ ತೆರೆಗೆ ‘ಹೆಬ್ಬೆಟ್ ರಾಮಕ್ಕ’

Published:
Updated:

‘ಹೆಬ್ಬೆಟ್‍ ರಾಮಕ್ಕ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಯು’ ಪ್ರಮಾಣಪತ್ರ ನೀಡಿದ್ದು, ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಎನ್.ಆರ್. ನಂಜುಂಡೇಗೌಡ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು ಹಾಗೂ ಚನ್ನಪಟ್ಟಣ ಸುತ್ತಮುತ್ತ ನಡೆದಿದೆ. ಎಸ್.ಎ. ಪುಟ್ಟರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ ಮತ್ತು ಚಿತ್ರಕಥೆಯ ಹೊಣೆಯನ್ನು ನಂಜುಂಡೇಗೌಡ ಅವರೇ ಹೊತ್ತುಕೊಂಡಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆ, ಬಿ. ಸತೀಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಹಿರಿಯ ನಟಿ ತಾರಾ ಅವರು ರಾಮಕ್ಕನಾಗಿ ಅಭಿನಯಿಸಿದ್ದಾರೆ. ದೇವರಾಜ್, ಹನುಮಂತೇಗೌಡ್ರು, ನಾಗರಾಜಮೂರ್ತಿ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry