ಕರ್ನಾಟಕದ ಸೈಕ್ಲಿಸ್ಟ್‌ಗಳಿಗೆ ಐದು ಚಿನ್ನ

7

ಕರ್ನಾಟಕದ ಸೈಕ್ಲಿಸ್ಟ್‌ಗಳಿಗೆ ಐದು ಚಿನ್ನ

Published:
Updated:
ಕರ್ನಾಟಕದ ಸೈಕ್ಲಿಸ್ಟ್‌ಗಳಿಗೆ ಐದು ಚಿನ್ನ

ಹುಬ್ಬಳ್ಳಿ: ಕರ್ನಾಟಕದ ಸೈಕ್ಲಿಸ್ಟ್‌ಗಳು  ನವದೆಹಲಿಯಲ್ಲಿ ನಡೆಯುತ್ತಿರುವ ಸೀನಿಯರ್, ಜೂನಿಯರ್ ಮತ್ತು ಸಬ್‌ ಜೂನಿಯರ್‌ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರದ ಅಂತ್ಯಕ್ಕೆ  ಐದು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.

18 ವರ್ಷದ ಒಳಗಿನವರ ಬಾಲ ಕರ ವಿಭಾಗದ 10 ಕಿ.ಮೀ. ಸ್ಕ್ರ್ಯಾಚ್ ವಿಭಾಗ ದಲ್ಲಿ ರಾಜುಬಾಟಿ ಚಿನ್ನ ಜಯಿಸಿದರು. ಪುರುಷರ 4 ಕಿ.ಮೀ. ವೈಯಕ್ತಿಕ ಪರ್ಸೂಟ್‌ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪಡೆದರು.

16 ವರ್ಷದ ಒಳಗಿನವರ 4 ಕಿ.ಮೀ. ಸ್ಕ್ರ್ಯಾಚ್ ವಿಭಾಗದಲ್ಲಿ ದಾನಮ್ಮ ಚಿಚಖಂಡಿ ಚಿನ್ನ ಪಡೆದರು. 2 ಕಿ.ಮೀ. ವೈಯುಕ್ತಿಕ ಪರ್ಸೂಟ್‌ ವಿಭಾಗದಲ್ಲಿಯೂ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 2 ಕಿ.ಮೀ. ವೈಯಕ್ತಿಕ ಪರ್ಸೂಟ್‌ ವಿಭಾಗ ದಲ್ಲಿ ಮೇಘಾ ಗೂಗಾಡ ಚಿನ್ನದ ಒಡತಿ ಯಾದರು. 18 ವರ್ಷದ ಒಳಗಿನವರ 3 ಕಿ.ಮೀ. ವೈಯಕ್ತಿಕ ಪರ್ಸೂಟ್‌ ವಿಭಾಗ ದಲ್ಲಿ ವೆಂಕಪ್ಪ ಕೆಂಗಲಗುತ್ತಿ ಕಂಚು ಪಡೆದುಕೊಂಡರು.

ಬಾಲಕರ 4 ಕಿ.ಮೀ. ಪರ್ಸೂಟ್‌ ವಿಭಾಗದ ತಂಡ ಸ್ಪರ್ಧೆಯಲ್ಲಿ ರಾಜು ಬಾಟಿ, ವೆಂಕಪ್ಪ ಕೆಂಗಲಗುತ್ತಿ, ಸಂಜು ನಾಯಕ ಮತ್ತು ನಾಗರಾಜ ಸೋಮ ಗೊಂಡ ಅವರನ್ನೊಳಗೊಂಡ ಕರ್ನಾ ಟಕ ತಂಡ ಕಂಚು ಜಯಿಸಿತು. ಪುರುಷರ 4 ಕಿ.ಮೀ. ಪರ್ಸೂಟ್‌ ವಿಭಾಗದ ತಂಡ ಸ್ಪರ್ಧೆಯಲ್ಲಿ ಕರ್ನಾಟಕದ ಸ್ಪರ್ಧಿ ಗಳು ಕಂಚು ಪಡೆದರು. ಮಾಳಪ್ಪ ಮೂರ್ತ ನ್ನವರ, ಸಂತೋಷ ಕುರಣಿ, ರಾಜು ಬಾಟಿ, ವೆಂಕಪ್ಪ ಕೆಂಗಲಗುತ್ತಿ ಅವರು ಈ ತಂಡದಲ್ಲಿದ್ದರು.

ಬಾಲಕಿಯರ 3 ಕಿ.ಮೀ. ಪರ್ಸೂಟ್‌ ವಿಭಾಗದ ತಂಡ ಸ್ಪರ್ಧೆಯಲ್ಲಿ ಮೇಘಾ ಗೂಗಾಡ, ದಾನಮ್ಮ ಚಿಚಖಂಡಿ, ಸಾವಿತ್ರಿ ಹೆಬ್ಬಾಳಟ್ಟಿ, ಸಹನಾ ಕುಡಿ ಗಾನೂರ ಅವರನ್ನು ಒಳಗೊಂಡ ರಾಜ್ಯ ತಂಡದವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಜ. 6ರ ವರೆಗೆ ಚಾಂಪಿ ಯನ್‌ಷಿಪ್‌ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry