ಸೋಮವಾರ, ಆಗಸ್ಟ್ 3, 2020
26 °C

ಐಎಸ್‌ಎಲ್‌: ಬಲಿಷ್ಠ ತಂಡಗಳ ಕಾದಾಟ

ಪಿಟಿಐ Updated:

ಅಕ್ಷರ ಗಾತ್ರ : | |

ಐಎಸ್‌ಎಲ್‌: ಬಲಿಷ್ಠ ತಂಡಗಳ ಕಾದಾಟ

ಜಮ್‌ಶೇಡ್‌ಪುರ: ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿರುವ ಎರಡು ತಂಡಗಳ ಕಾದಾಟಕ್ಕೆ ಇಲ್ಲಿನ ಜೆ.ಆರ್‌.ಡಿ ಟಾಟಾ ಕ್ರೀಡಾ ಸಂಕೀರ್ಣ ಸಜ್ಜುಗೊಂಡಿದೆ.

ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಶುಕ್ರವಾರದ ಪಂದ್ಯ ದಲ್ಲಿ ಆತಿಥೇಯ ಜಮ್‌ಶೇಡ್‌ಪುರ ಎಫ್‌ಸಿ (ಜೆಎಫ್‌ಸಿ) ತಂಡವನ್ನು ಮುಂಬೈ ಸಿಟಿ ಎಫ್‌ಸಿ ತಂಡ ಎದುರಿಸಲಿದ್ದು ಫುಟ್‌ಬಾಲ್ ಪ್ರಿಯರಿಗೆ ಈ ಹಣಾಹಣಿ ಈ ರೋಮಾಂಚನ ನೀಡಲಿದೆ.

ಜಮ್‌ಶೇಡ್‌ಪುರ ಎಫ್‌ಸಿ ತಂಡ ಈ ವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಎರಡು ಗೋಲುಗಳನ್ನು ಬಿಟ್ಟುಕೊಟ್ಟಿದೆ. ಗೋಲ್‌ಕೀಪರ್ ಸುಬ್ರತಾ ಪಾಲ್ ಐದು ಗೋಲುಗಳನ್ನು ತಡೆದು ಗಮನ ಸೆಳೆದಿದ್ದಾರೆ. ಮುಂಬೈ ಸಿಟಿ ಎಫ್‌ಸಿ ತಂಡ ಏಳು ಗೋಲುಗಳನ್ನು ಬಿಟ್ಟುಕೊಟ್ಟಿದೆ.

ಈ ಪೈಕಿ ಐದು ಗೋಲುಗಳು ತವರಿನಿಂದ ಹೊರಗೆ ನಡೆದ ಪಂದ್ಯಗಳಲ್ಲೇ ದಾಖಲಾಗಿವೆ. ಆದ್ದರಿಂದ ಈ ಪಂದ್ಯದಲ್ಲಿ ತಂಡದ ಸ್ವಲ್ಪ ಆತಂಕಕ್ಕೆ ಒಳಗಾಗಿದೆ. ಜಮ್‌ಶೇಡ್‌ಪುರ ಎಫ್‌ಸಿ ಲೀಗ್‌ನಲ್ಲಿ ಎರಡು ಗೋಲುಗಳನ್ನು ಮಾತ್ರ ಗಳಿಸಿದ್ದರೆ ಮುಂಬೈ ಸಿಟಿ 11 ಗೋಲುಗಳನ್ನು ಗಳಿಸಿದೆ.

ಪಾಯಿಂಟ್ ಪಟ್ಟಿಯಲ್ಲಿ ಈ ಎರಡು ತಂಡಗಳ ನಡುವೆ ಕೇವಲ ನಾಲ್ಕು ಪಾಯಿಂಟ್‌ಗಳ ಅಂತರವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.