ಗುರುವಾರ , ಜೂಲೈ 2, 2020
27 °C

ಒಡಹುಟ್ಟಿದವರನ್ನು ಪ್ರತ್ಯೇಕವಾಗಿ ದತ್ತು ನೀಡಲು ಅವಕಾಶ: ಮೇನಕಾ

ಪಿಟಿಐ Updated:

ಅಕ್ಷರ ಗಾತ್ರ : | |

ಒಡಹುಟ್ಟಿದವರನ್ನು ಪ್ರತ್ಯೇಕವಾಗಿ ದತ್ತು ನೀಡಲು ಅವಕಾಶ: ಮೇನಕಾ

ನವದೆಹಲಿ: ಪಾಲಕರಿಂದ ಬೇರ್ಪಟ್ಟಿರುವ, ಒಂದೇ ಕುಟುಂಬದ ಐದು ವರ್ಷ ಮೇಲ್ಪಟ್ಟ ಮಕ್ಕಳನ್ನು ಪ್ರತ್ಯೇಕವಾಗಿ ದತ್ತು ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.

ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್‌ಎ) ಒಡಹುಟ್ಟಿದ ಮಕ್ಕಳನ್ನು ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ, ಒಂದೇ ಕುಟುಂಬಕ್ಕೆ ಇದುವರೆಗೆ ದತ್ತು ನೀಡುತ್ತಿದೆ. ಈ ನಿಯಮವನ್ನು ಬದಲಿಸಲಾಗುವುದು. ಆದರೆ, ಪ್ರತ್ಯೇಕಗೊಳ್ಳಲು ಮಕ್ಕಳ ಒಪ್ಪಿಗೆ ಅಗತ್ಯ ಎಂದು ಅವರು ತಿಳಿಸಿದರು.

ಈ ಬಗ್ಗೆ ದತ್ತು ಪ್ರಾಧಿಕಾರವು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಸೇರಿದಂತೆ ಇತರೆ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಲಿದೆ ಎಂದು ಹೇಳಿದರು.

‘ಮಗುವೊಂದನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದೆ. ಆದರೆ, ಒಡಹುಟ್ಟಿದ ಮಕ್ಕಳು ಎಂಬ ಕಾರಣಕ್ಕೆ ಇದುವರೆಗೆ ಮಗುವನ್ನು ಹೊಂದಲು ಸಾಧ್ಯವಾಗಿಲ್ಲ’ ಎಂದು ಮಹಿಳೆಯೊಬ್ಬರು ತಮ್ಮ ಬಳಿ ಅಳಲು ತೋಡಿಕೊಂಡಿದ್ದರು ಎಂದು ಮಾಹಿತಿ ನೀಡಿದರು.

ಐದು ವರ್ಷದ ಮಕ್ಕಳು ಇಂತಹ ನಿರ್ಧಾರ ಕೈಗೊಳ್ಳುವಷ್ಟು ಶಕ್ತರೇ ಎಂಬ ಸುದ್ದಿಗಾರರ ಪ್ರಶ್ನೆಗೆ ‘ನಾನೇನು ಮಾಡಬೇಕು ನೀವು ಹೇಳಿ? ಒಡಹುಟ್ಟಿದವರು ಎಂಬ ಕಾರಣಕ್ಕೆ ಅನಾಥಾಶ್ರಮಗಳಲ್ಲಿಯೇ ಅವರನ್ನು ಇರಿಸಬೇಕಾ? ’ ಎಂದು ಪ್ರಶ್ನಿಸಿದರು.

ಇಷ್ಟಪಟ್ಟು ಬೇರ್ಪಡುವುದಾದರೆ ಬೇರ್ಪಡಲಿ ಇಲ್ಲದಿದ್ದರೆ ಬೇಡ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.