ಗುರುವಾರ, 1 ಜನವರಿ 2026
×
ADVERTISEMENT
ADVERTISEMENT

ಸ್ವಿಟ್ಜರ್ಲೆಂಡ್ ಬಾರ್‌ನಲ್ಲಿ ಅಗ್ನಿ ಅವಘಡ: ದುಃಸ್ವಪ್ನವಾಗಿ ಬದಲಾದ ಸಂಭ್ರಮದ ಸಂಜೆ

Published : 1 ಜನವರಿ 2026, 14:41 IST
Last Updated : 1 ಜನವರಿ 2026, 14:41 IST
ಫಾಲೋ ಮಾಡಿ
Comments
ಮೃತರು ಗಾಯಗೊಂಡವರು ಮತ್ತು ಅವರ ಕುಟುಂಬ ಸದಸ್ಯರ ಜತೆಗೆ ಸರ್ಕಾರ ನಿಲ್ಲಲಿದೆ. ಅಗತ್ಯವಿರುವ ಎಲ್ಲ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ 
ಗೈ ಪಾರ್ಮೆಲಿನ್‌ ಸ್ವಿಟ್ಜರ್ಲೆಂಡ್‌ ಅಧ್ಯಕ್ಷ 
ಸಂಭ್ರಮದ ಬೆನ್ನಲ್ಲೇ ದುರಂತ
ಸ್ವಿಸ್‌ ಆಲ್ಪ್ಸ್‌ನ ಹೃದಯಭಾಗದಲ್ಲಿ ಸುಮಾರು 3 ಸಾವಿರ ಮೀಟರ್‌ ಎತ್ತರದಲ್ಲಿರುವ ಕ್ರಾನ್ಸ್‌ –ಮೊಂಟಾನ ಸ್ವಿಟ್ಜರ್ಲೆಂಡ್‌ನ ಪ್ರಮುಖ ಪ್ರವಾಸಿ ತಾಣ. ಚಳಿಗಾಲದ ಪ್ರಮುಖ ಕ್ರೀಡಾ ವಿನೋದ ಕೇಂದ್ರ. ಇಲ್ಲಿ ಹೊಸ ವರ್ಷಾಚರಣೆಗೆ ಜನರು ಕಿಕ್ಕಿರಿದು ಸೇರಿದ್ದರು. ಸಂಭ್ರಮದ ಹೊನಲು ಹರಿಯುತ್ತಿದ್ದ ಈ ಪ್ರದೇಶವು ಕೆಲ ಕ್ಷಣಗಳಲ್ಲೇ ದುರಂತಕ್ಕೆ ಸಾಕ್ಷಿಯಾಯಿತು. ಅಗ್ನಿಯ ಜ್ವಾಲೆಗಳು ಧಗಧಗಿಸುತ್ತಿದ್ದಂತೆ ಜನರು ಜೀವ ಉಳಿಸಿಕೊಳ್ಳಲು ಬಾರ್‌ ಒಳಗಿನಿಂದ ದಿಕ್ಕಾ‍ಪಾಲಾಗಿ ಓಡಿದರು. ಕೆಲವರು ಹೊರಬರಲಾಗದೆ ಅಲ್ಲೇ ದಹನವಾದರು. ಕಾಲ್ತುಳಿತದಲ್ಲಿ ಸಿಲುಕಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡರು. ಘಟನಾ ಸ್ಥಳದಿಂದ ಸಾಕಷ್ಟು ಜನರನ್ನು ರಕ್ಷಿಸಿ ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ನೂರಾರು ಜನರು ಇದ್ದಾರೆ.  ನೋಡುನೋಡುತ್ತಿದ್ದಂತೆ ಸಂಭ್ರಮದ ಸಂಜೆಯು ದುಃಸ್ವಪ್ನವಾಗಿ ಬದಲಾಯಿತು’ ಎಂದು ಕ್ರಾನ್ಸ್‌ –ಮೊಂಟಾನದ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಮಥಿಯಾಸ್‌ ರೆನಾರ್ಡ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT