ಶ್ರೀನಿವಾಸಯ್ಯ ದತ್ತಿ ನಿಧಿಗೆ ಚಾಲನೆ

7

ಶ್ರೀನಿವಾಸಯ್ಯ ದತ್ತಿ ನಿಧಿಗೆ ಚಾಲನೆ

Published:
Updated:
ಶ್ರೀನಿವಾಸಯ್ಯ ದತ್ತಿ ನಿಧಿಗೆ ಚಾಲನೆ

ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು ‘ಡಾ. ಹೊ.ಶ್ರೀನಿವಾಸಯ್ಯ ದತ್ತಿ ನಿಧಿ’ಯನ್ನು ಸ್ಥಾಪಿಸಿದ್ದು, ₹ 2 ಲಕ್ಷವನ್ನು ಠೇವಣಿ ಇಡಲಾಗಿದೆ.

ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಅವರು ಇದಕ್ಕೆ ಚಾಲನೆ ನೀಡಿದರು.

‘ಗಾಂಧಿಮಾರ್ಗಿ ಹೊ.ಶ್ರೀ.’ ಸಂಸ್ಮರಣಾ ಕೃತಿಯನ್ನು ಬಿಡುಗಡೆ ಮಾಡಿದರು. ಹೊ.ಶ್ರೀನಿವಾಸಯ್ಯ ಚಾರಿಟಬಲ್ ಟ್ರಸ್ಟ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಘಟಕದ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಎಚ್.ಕೆ.ಪಾಟೀಲ್, ‘ಶ್ರೀನಿವಾಸಯ್ಯ ಅವರು ಇಳಿ ವಯಸ್ಸಿನಲ್ಲೂ ತಮ್ಮ ನಡವಳಿಕೆಯಿಂದ ಸೊಕ್ಕಿನವರನ್ನು ವಿನಮ್ರರನ್ನಾಗಿಸುತ್ತಿದ್ದರು. ಬದುಕಿನಲ್ಲಿ ಯಶಸ್ವಿಯಾಗಲು ಹೇಗೆ ಜೀವಿಸಬೇಕು ಎಂಬುದಕ್ಕೆ ಅವರು ಉತ್ತಮ ನಿದರ್ಶನ. ಸಿನಿಮಾ ನಟ, ನಟಿಯರಿಗಿಂತ ಶ್ರೀನಿವಾಸಯ್ಯ ಅವರು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry