ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಮಲ್ಲಗಂಬ ಪ್ರದರ್ಶನ

Last Updated 5 ಜನವರಿ 2018, 7:17 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಠದ ಮುಂದಿನ ಮೈದಾನದಲ್ಲಿ ಗುರುವಾರ ಹಲವು ಬಗೆಯ ಯೋಗಾಸನ ಕಸರತ್ತುಗಳು ಕಂಡುಬಂದವು. ಬಾಗಲಕೋಟೆಯ ಜಿಲ್ಲೆಯ ಹುನುಗುಂದ ತಾಲ್ಲೂಕಿನ ಬಲಕುಂದಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಲ್ಲಗಂಬ ಪ್ರದರ್ಶಿಸಿದರು. ಮಲ್ಲಗಂಬವನ್ನೇರಿದ ಬಾಲಕರು ಅದರಲ್ಲೇ ವಿವಿಧ ಬಗೆಯ ಯೋಗಾಸನಗಳನ್ನು ಪ್ರದರ್ಶಿಸಿದರು.

ಸಲಾಮಿ, ದಸರಂಗ್, ಅಕರ್ಣಾಧನುರಾಸನ, ಕೂರ್ಮಾಸನ, ಹಲಾಸನ, ಟಿ.ಬ್ಯಾಲೆನ್ಸ್‌, ಪದ್ಮಾಸನ, ಬಗಲಿಪರಾರ್, ಭಜರಂಗ, ನಟರಾಜಾಸನ, ಸಂಖ್ಯಾಸನ, ಚಕೋರಾಸನ, ನೌಕಾಸನ, ಹನುಮಾನ್‌ ಧ್ವಜ, ಮುಯೂರಾಸನ, ರಾಜಾಸನ, ವೀರಭದ್ರಾಸನ ಪ್ರದರ್ಶಿಸಿದರು. ರಾಷ್ಟ್ರಮಟ್ಟದ ಯೋಗ ಪಟು ಮಲ್ಲಿಕಾರ್ಜುನ ಹಡಪದ ಇವರು ಮಲ್ಲಗಂಬಕ್ಕೆ ಪೂಜೆ ಸಲ್ಲಿಸುವ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಚಲನಚಿತ್ರೋತ್ಸವದಲ್ಲಿ ಮಂಸೋರೆ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ 'ಹರಿವು', ಬಿ.ಎಂ. ಗಿರಿರಾಜ್‌ ನಿರ್ದೇಶನದ ರಾಜ್ಯ ಪ್ರಶಸ್ತಿ ವಿಜೇತ 'ಅಮರಾವತಿ' ಚಿತ್ರ ಪ್ರದರ್ಶನಗೊಂಡಿತು.

ಸುಡುಗಾಡು ಸಿದ್ದರ ಕಲಾ ಪ್ರದರ್ಶನ: ಜಾತ್ರಾ ಮೈದಾನದಲ್ಲಿ ಮಧ್ಯಾಹ್ನ ಕಲಕೇರಿಯ ಹನುಮಂತಪ್ಪ ಗಂಟಿ ಅವರಿಂದ ಸುಡುಗಾಡು ಸಿದ್ದರ ಕಲಾಪ್ರದರ್ಶನ ಜರುಗಿತು. ಗವಿ ಜಂತಕಲ್ ಅವರು ಪ್ರದರ್ಶನದ ಉಸ್ತುವಾರಿ ವಹಿಸಿದ್ದರು.

ದಾಸೋಹದಲ್ಲಿ ಮಿರ್ಚಿ ಸವಿ: ಜಾತ್ರೆಯ ದಾಸೋಹದಲ್ಲಿ ಗುರುವಾರ ಮಿರ್ಚಿ (ಮೆಣಸಿನಕಾಯಿ ಭಜಿ) ಇದ್ದದ್ದು ವಿಶೇಷ. ಹೈದರಾಬಾದ್‌ - ಕರ್ನಾಟಕ ಹೋರಾಟ ಯುವ ಸಮಿತಿ ಮುಖಂಡರ ನೇತೃತ್ವದಲ್ಲಿ ಮಿರ್ಚಿ ತಯಾರಿಕೆ ನಡೆಯಿತು. 300 ಬಾಣಸಿಗರು. 3 ಲಕ್ಷ ಮಿರ್ಚಿ ತಯಾರಿಸುವಲ್ಲಿ ಮಗ್ನರಾಗಿದ್ದರು. ಸಮಿತಿ ಮುಖಂಡ ಮಂಜುನಾಥ ಅಂಗಡಿ ನೇತೃತ್ವ ವಹಿಸಿದ್ದರು.

ಮಿರ್ಚಿಗಳ ತಯಾರಿಗಾಗಿ ಸಿರಗುಪ್ಪ ನಿವಾಸಿ ಆರವಿ ಶಾಂತಮೂರ್ತಿ ಅವರು 15 ಕ್ವಿಂಟಲ್‌ ಕಡಲೆ ಬೇಳೆಯನ್ನು ದಾಸೋಹಕ್ಕೆ ಕೊಟ್ಟಿದ್ದರು. ಇದಕ್ಕೆ ಬೇಕಾಗುವ ಎಣ್ಣೆ, ಹಸಿ ಮೆಣಸಿನಕಾಯಿ, ಜೀರಿಗೆ, ಉಪ್ಪು ಇತರ ವಸ್ತುಗಳನ್ನು ಗವಿಮಠದಿಂದ ಪೂರೈಸಲಾಗಿದೆ. 12 ಕ್ವಿಂಟಲ್ ಹಸಿ ಮೆಣಸಿನಕಾಯಿ, 7 ಬ್ಯಾರೆಲ್ ಎಣ್ಣೆ, 60 ಬಾಣಸಿಗರ ಒಂದು ತಂಡದಂತೆ 5 ತಂಡಗಳು ಒಟ್ಟು 300 ಕ್ಕಿಂತ ಅಧಿಕ ಬಾಣಸಿಗರು ಮಿರ್ಚಿ ತಯಾರಿಸಿದ್ದಾರೆ. 20 ಜನರ ತಂಡ ಮಿರ್ಚಿ ವಿತರಿಸಿತು.

ಜಾತ್ರೆಯಲ್ಲಿ ಇಂದು

lಕಬಡ್ಡಿ ಪಂದ್ಯಾವಳಿ: ಗವಿಮಠದ ಆವರಣ: ಬೆಳಿಗ್ಗೆ 11

lಸಮಾರೋಪ: ಕೈಲಾಸ ಮಂಟಪ, ಸಾನ್ನಿಧ್ಯ: ಹುಬ್ಬಳ್ಳಿಯ ಮೂರುಸಾವಿರಮಠದ ಗುರುಸಿದ್ಧಯೋಗೇಂದ್ರ ಸ್ವಾಮೀಜಿ, ಮಾನವಿ ಕಲ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಮಾರೋಪ ನುಡಿ: ಸಾಹಿತಿ ದೊಡ್ಡರಂಗೇಗೌಡ

lಭಾವ-ತರಂಗ: ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್

l ಸಂಗೀತ ಕಾರ್ಯಕ್ರಮ: ಬೆಂಗಳೂರಿನ ಸರಿಗಮಪ ಕಲಾವಿದ ಶ್ರೀರಾಮ್‍ ಕಾಸಲ್‍, ಕಲಬುರ್ಗಿಯ ಸರಿಗಮಪ ಕಲಾವಿದ ಸುನೀಲ ಗುಜಗುಂಡ

l ಜಲ-ತರಂಗ: ಧಾರವಾಡದ ಶಶಿಕಲಾ ಢಾಣಿ

l ಸಾಹಸ ಪ್ರದರ್ಶನ: ಹೊಳೆ ಆಲೂರಿನ ಜ್ಞಾನಸಿಂಧು ಅಂಧ ಶಾಲೆ ವಿದ್ಯಾರ್ಥಿಗಳು

lಹಾಸ್ಯ: ಗಂಗಾವತಿಯ ಬಿ.ಪ್ರಾಣೇಶ್‌ ಎಲ್ಲ ಕಾರ್ಯಕ್ರಮಗಳು ಸಂಜೆ 6ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT