ಬೆಂಗಳೂರಿನಲ್ಲಿ ತಡರಾತ್ರಿ ಕಳ್ಳರ ಅಟ್ಟಹಾಸ

5

ಬೆಂಗಳೂರಿನಲ್ಲಿ ತಡರಾತ್ರಿ ಕಳ್ಳರ ಅಟ್ಟಹಾಸ

Published:
Updated:
ಬೆಂಗಳೂರಿನಲ್ಲಿ ತಡರಾತ್ರಿ ಕಳ್ಳರ ಅಟ್ಟಹಾಸ

ಬೆಂಗಳೂರು: ರಾಮಮೂರ್ತಿ ನಗರದ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್‌ ಸ್ಟೋರ್ ಮುಂಭಾಗದಲ್ಲಿ ಗುರುವಾರ ತಡರಾತ್ರಿ ಕಳ್ಳರು ಅಟ್ಟಹಾಸ ಮೆರೆದಿದ್ದಾರೆ. ಸ್ಟೋರ್ ನುಗ್ಗಲು ಯತ್ನಿಸಿದ ಮೂರು ಜನ ಕಳ್ಳರು  ಸ್ಟೋರ್ ಬಾಗಿಲಲ್ಲೇ ರಾತ್ರಿ ಪಾಳಿಯಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ನಂತರ ಸ್ಟೋರ್‌ ರೋಲಿಂಗ್‌ ಷಟರ್ ಒಡೆಯಲು ಪ್ರಯತ್ನಿಸಿದ ಖದೀಮರು, ಷಟರ್‌ ಒಡೆಯಲು ಸಾಧ್ಯವಾಗದೆ ಸೆಕ್ಯುರಿಟಿ ಗಾರ್ಡ್ ಬಳಿಯಿದ್ದ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ.

ಸದ್ಯ ಸಂತ್ರಸ್ತ ಬಿಹಾದಿ ರಾಯ್‌ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಟೋದಲ್ಲಿ ಬಂದಿದ್ದ ಮೂರು ಜನ ದುಷ್ಕರ್ಮಿಗಳು ನಡೆಸಿದ ಈ ಕೃತ್ಯದ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry