ಶನಿವಾರ, ಜೂಲೈ 4, 2020
21 °C

ಗುಂಡ್ಲುಪೇಟೆ: ಆನೆ ಹಿಂಡು ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಆನೆ ಹಿಂಡು ಪ್ರತ್ಯಕ್ಷ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ ಓಂಕಾರ ವಲಯದ ಅಂಚಿನ ಕುರುಬರ ಹುಂಡಿ ಗ್ರಾಮದಲ್ಲಿ ಶುಕ್ರವಾರ ಮರಿಯಾನೆ ಸೇರಿದಂತೆ ಆನೆಗಳ ಗುಂಪು ಕಾಣಿಸಿಕೊಂಡಿದೆ.

ಮಂಚಹಳ್ಳಿ ಬೆಟ್ಟದ ಕೆಳ ಭಾಗದಲ್ಲಿ 5 ಆನೆಗಳ ಗುಂಪು ಸಂಚರಿಸುತ್ತಿದೆ. ಈ ಭಾಗದಲ್ಲಿ ಪದೇ ಪದೇ ಆನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ರೈತರು ಮತ್ತು ಕುರಿಗಾಹಿಗಳು ಕೆಲಸಕ್ಕೆ ಹೋಗಲು ಹೆದರುತ್ತಿದ್ದಾರೆ.

‘ಈ ಭಾಗದಲ್ಲಿ ಇತ್ತೀಚೆಗೆ ಆನೆ ಮರಿಯೊಂದು ತಪ್ಪಿಸಿಕೊಂಡು ಮೃತಪಟ್ಟಿತ್ತು. ಇದ್ದರಿಂದ ಆನೆಗಳ ಗುಂಪು ಈ ಭಾಗದಲ್ಲೇ ಓಡಾಡುತ್ತಿದೆ. ಅವುಗಳನ್ನು ದೂರ ಓಡಿಸಲು, ಬರುವ ಮಾರ್ಗವನ್ನು ಬಂದ್ ಮಾಡಲಾಗಿದೆ’ ಎಂದು ಓಂಕಾರ ವಲಯದ ಅರಣ್ಯಾಧಿಕಾರಿ ನವೀನ್‌ಕುಮಾರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.