ಜಿಯೊ: ತಿಂಗಳ ದರ ₹ 50 ಕಡಿತ

7

ಜಿಯೊ: ತಿಂಗಳ ದರ ₹ 50 ಕಡಿತ

Published:
Updated:

ನವದೆಹಲಿ: ಮೊಬೈಲ್‌ ಸೇವಾ ಸಂಸ್ಥೆ ರಿಲಯನ್ಸ್‌ ಜಿಯೊ,  ತನ್ನ ಎಲ್ಲ ತಿಂಗಳ ಯೋಜನೆಗಳ ದರಗಳಲ್ಲಿ ₹ 50 ಕಡಿತ ಮಾಡಿದೆ. ₹ 199, ₹ 399, ₹ 459 ಮತ್ತು ₹ 499 ಯೋಜನೆಗಳ ದರಗಳು ₹ 50 ರಷ್ಟು ಕಡಿಮೆಯಾಗಲಿವೆ.

ಹೊಸ ಯೋಜನೆಯಡಿ ಗ್ರಾಹಕರು ಪ್ರತಿ ದಿನ 1 ಜಿಬಿ ಡೇಟಾ ಪಡೆಯಲಿದ್ದಾರೆ. ಆಯ್ದ ಯೋಜನೆಗಳಡಿ ಡೇಟಾ ಮಿತಿಯನ್ನು 1.5 ಜಿಬಿಗೆ ಹೆಚ್ಚಿಸಲಾಗಿದೆ. ಒಂದು ದಿನದ 1 ಜಿಬಿ ಡೇಟಾ ದರವನ್ನು ₹ 4ಕ್ಕೆ ಇಳಿಸಿದೆ.

ಹೊಸ ವರ್ಷದ ಕೊಡುಗೆಯಡಿ ₹ 399 ಯೋಜನೆ ಆಯ್ಕೆ ಮಾಡಿಕೊಂಡ ಗ್ರಾಹಕರಿಗೆ ಎರಡು ವಾರಗಳ ಹೆಚ್ಚುವರಿ ಕಾಲಾವಧಿ ವಿಸ್ತರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry