ಸೋಮವಾರ, ಜೂಲೈ 6, 2020
22 °C

‘ವೈದಿಕ ಜನಾಂಗದ ವಿರುದ್ಧ ಹೋರಾಟ ನಿಲ್ಲದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವೈದಿಕ ಜನಾಂಗದ ವಿರುದ್ಧ ಹೋರಾಟ ನಿಲ್ಲದು’

ಬೆಂಗಳೂರು: ನಮ್ಮ ದೇಶದ ದೊಡ್ಡ ಸಮಸ್ಯೆ ಎಂದರೆ ವೈದಿಕ ಜನಾಂಗ. ಅವರು ವೈದಿಕ ಸಿದ್ಧಾಂತವನ್ನು ಜನಸಮುದಾಯದ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಪತ್ರಕರ್ತ ಅಗ್ನಿ ಶ್ರೀಧರ್‌ ಆರೋಪಿಸಿದರು.

ಶುಕ್ರವಾರ ಇಲ್ಲಿ ನಡೆದ ‘ಭೀಮಾ– ಕೋರೆಗಾಂವ್‌ ಕದನ ಸ್ಮರಣೆ: ಅಂದು ಮತ್ತು ಇಂದು’ ಸಂವಾದದಲ್ಲಿ ಮಾತನಾಡಿದರು.

‘ಕೋರೆಗಾಂವ್‌ ಸಂಘರ್ಷ ವೈದಿಕ ನಡೆಯ ವಿರುದ್ಧದ ಆರಂಭ. ಇದು ಒಂದು ಮಾದರಿ ಎಂದು ಭಾವಿಸುತ್ತೇವೆ. ನಾವು ಬ್ರಾಹ್ಮಣರ ವಿರುದ್ಧ ಅಲ್ಲ. ಆದರೆ, ವೈದಿಕರು ನಮ್ಮವರಲ್ಲ. ಅವರನ್ನು ಬುಡಸಮೇತ ಕೀಳುವವರೆಗೆ ಹೋರಾಟ ಬಿಡುವುದಿಲ್ಲ’ ಎಂದರು.

‘200 ವರ್ಷಗಳಿಂದ ವಿಜಯೋತ್ಸವ ನಡೆಯುತ್ತಿದೆ. ಆದರೆ, ಈ ಬಾರಿ ಮಾತ್ರ ಗಲಭೆ ಆಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವುದು ಇದಕ್ಕೆ ಕಾರಣ. ಬಿಜೆಪಿಯಲ್ಲಿ ಇರುವವರೆಲ್ಲ ವೈದಿಕರಲ್ಲ. ಬಿಜೆಪಿ ಸರ್ಕಾರದ ಆಸರೆಯಲ್ಲಿ ವೈದಿಕ ಜನಾಂಗವು ಸಮಾಜವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದರು.

ಪತ್ರಕರ್ತ ಹಿಂದೂಧರ ಹೊನ್ನಾಪುರ, ‘ಅಂಬೇಡ್ಕರ್‌ ಹೆಸರಿನಲ್ಲಿದ್ದ ಸಂಶೋಧನಾ ಕೇಂದ್ರಗಳನ್ನು ಕೇಂದ್ರ ಸರ್ಕಾರ ಮುಚ್ಚುತ್ತಿದೆ. ಅವರ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ನಮ್ಮ ಕಣ್ಣಿಗೆ ಮಣ್ಣೆರಚುತ್ತಿದೆ. ನಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಟ ಮಾಡಬೇಕಿದೆ. ಕೋರೆಗಾಂವ್‌ ವಿಜಯೋತ್ಸವದ ಗಲಭೆ ನಮ್ಮ ರಾಜಕೀಯ ಮುನ್ನೋಟ ಬದಲಾಯಿಸುವ ದೊಡ್ಡ ಉದಾಹರಣೆಯಾಗಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.