ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲೆಗೆ 100 ಟಿಎಂಸಿ ಅಡಿ ಕೃಷ್ಣೆಯ ನೀರು'

Last Updated 6 ಜನವರಿ 2018, 6:16 IST
ಅಕ್ಷರ ಗಾತ್ರ

ಕಾತ್ರಾಳ (ವಿಜಯಪುರ): ‘ಕನಮಡಿಗೆ ಕೃಷ್ಣೆಯ ನೀರು ತರುವೆ ಎಂದಾಗ ಅನೇಕರು ಕೊಂಕು ಮಾತಾಡಿದ್ದರು. ಆದರೆ ಜಿಲ್ಲೆಗೆ 100 ಟಿಎಂಸಿ ಅಡಿ ನೀರು ತರಲು ವಿವಿಧ ಯೋಜನೆ ರೂಪಿಸಿ, ಅನುಷ್ಠಾನಗೊಳಿಸುತ್ತಿರುವೆ. ಇದಕ್ಕೆ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದವೇ ಕಾರಣ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾತ್ರಾಳ ಗ್ರಾಮದ ಕೆರೆಗೆ ಶುಕ್ರವಾರ 5,001 ಮಹಿಳೆಯರಿಂದ ಗಂಗಾಪೂಜೆ, ಬಾಗಿನ ಅರ್ಪಣೆ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಿಮ್ಮ ಆಶೀರ್ವಾದದಿಂದಲೇ ಜಲಸಂಪನ್ಮೂಲ ಸಚಿವನಾಗಿ, ರಾಜ್ಯದ ಎಲ್ಲೆಡೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವೆ’ ಎಂದರು.

‘ಅಥಣಿಯಲ್ಲಿ ಕೆಂಪವಾಡ ಬಸವೇಶ್ವರ, ಸವದತ್ತಿ, ರಾಮದುರ್ಗಗಳಲ್ಲಿ ವೀರಭದ್ರೇಶ್ವರ, ತೇರದಾಳದಲ್ಲಿ ವೆಂಕಟೇಶ್ವರ, ಹುಕ್ಕೇರಿ, ರಾಯಬಾಗ, ಕುಡಚಿಗಳಲ್ಲಿ ಕೆರೆ ತುಂಬುವ ಯೋಜನೆ, ಬೀದರ್‌ನಲ್ಲಿ ಕಾರಂಜಾ– ಅಮರ್ಜಾ, ಕಲಬುರ್ಗಿಯಲ್ಲಿ ಬೆಣ್ಣೆತೊರಾ, ಮುಲ್ಲಾಮಾರಿ ಯೋಜನೆ ಜತೆಗೆ ಎಲ್ಲೆಡೆ ಕೆರೆ ತುಂಬುವ ನೂರು ಯೋಜನೆ ಆರಂಭಿಸಿದ್ದೇನೆ’ ಎಂದು ತಿಳಿಸಿದರು.

ಹಿರಿಯೂರಿನ ಆದಿಜಾಂಬವ ಬೃಹನ್ಮಠದ ಷಡಕ್ಷರಿಮುನಿದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ‘ಈ ಭಾಗದ ಪರಿಚಯವಿಲ್ಲದ ನನಗೆ ವಿಶೇಷವಾಗಿ ಎರಡು ಪರಿಚಯಗಳಾದವು. ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ನಡೆದಿದೆ. ಎಂ.ಬಿ.ಪಾಟೀಲರು ನಡೆಸಿರುವ ಅಭಿವೃದ್ಧಿಯೂ ಗೋಚರಿಸಿತು’ ಎಂದರು.

ಬಿದರಿ, ಕಲ್ಮಠ ಸವದತ್ತಿಯ ಶಿವಲಿಂಗ ಸ್ವಾಮೀಜಿ, ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ನಯಾನಗರ ಸಂಗಾಪುರದ ಅಭಿನವ ಸಿದ್ದಲಿಂಗ ದೇವರು, ಭಗೀರಥ ಪೀಠದ ಶಿವಾನಂದ ಸ್ವಾಮೀಜಿ, ಸಂಗಮೇಶ್ವರ ಮಹಾರಾಜರು, ಸಿದ್ಧಲಿಂಗ ಹಿರೇಮಠ ಸ್ವಾಮೀಜಿ, ಮಹಾಂತದೇವರು, ಶರಣ ಕುಠೀರ ಬನಹಟ್ಟಿ, ಶರಣಯ್ಯ ಹಿರೇಮಠ ಸ್ವಾಮೀಜಿ ಸಾಲೋಟಗಿ, ಹೊಕ್ಕುಂಡಿಯ ದಾನಮ್ಮ ತಾಯಿ, ಚಂದ್ರಕಲಾ ಗುಣದಾಳ ಶರಣರು ಆಶೀವರ್ಚನ ನೀಡಿದರು.

ಕಾತ್ರಾಳ, ಸಂಗಾಪುರ, ಕಂಬಾಗಿ, ಶೇಗುಣಸಿ, ಅರ್ಜುಣಗಿ, ಯಕ್ಕುಂಡಿ, ಹೊಕ್ಕುಂಡಿ, ತಿಗಣಿ ಬಿದರಿ ಗ್ರಾಮಗಳ ಪರವಾಗಿ ಎಂ.ಬಿ.ಪಾಟೀಲ, ಆಶಾ ಎಂ.ಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಗತಿಪರ ರೈತರಾದ ಕೆ.ಜಿ.ದೇಸಾಯಿ, ಎ.ಪಿ.ಎಂ.ಸಿ. ನಿರ್ದೇಶಕ ಮಹೇಶ ಮಾಳಿ, ಬೋಳಚಿಕ್ಕಲಕಿ ಭರತೇಶ ಲೋನಾರ, ಸಂತೋಷ ಮಾದರ, ಶ್ರೀಶೈಲ ಕೊಕಟನೂರ, ಶಂಕರ ಪೂಜಾರಿ ಮಾತನಾಡಿದರು. ಮಲ್ಲು ದಳವಾಯಿ ಸ್ವಾಗತಿಸಿ, ವಿಜಯ ಕುಮಾರ ದೇಸಾಯಿ ನಿರೂಪಿಸಿದರು.

ಮುಳವಾಡ ಏತ ನೀರಾವರಿ ಯೋಜನೆಯ ಮಲಘಾಣ ಪಶ್ಚಿಮ ಕಾಲುವೆ ನಿರ್ಮಾಣಕ್ಕೆ ಶ್ರಮಿಸಿದ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು, ಗುತ್ತಿಗೆದಾರರನ್ನು ರೈತರ ಪರವಾಗಿ ಸನ್ಮಾನಿಸಲಾಯಿತು. ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT