ರಾಯಪುರ: ಛತ್ತಿಸ್ಗಡದ ಕೊಂಡ್ಗಾಂವ್ ಜಿಲ್ಲೆಯಲ್ಲಿ ಮೂವರು ನಕ್ಸಲರನ್ನು ಬಂಧಿಸಲಾಗಿದೆ. ಬಂಧಿತರಿಂದ 10 ಕೆ.ಜಿ.ಭಾರದ ಟಿಫನ್ ಬಾಂಬ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಕಾರ್ಮಿಕರಿಗೆ ರಕ್ಷಣೆ ನೀಡಲು ಸಿಬ್ಬಂದಿ ಗಸ್ತಿನಲ್ಲಿದ್ದರು. ಆಗ ರಣಪಾಲ್ ಮತ್ತು ನವಗಾಂವ್ ಹಳ್ಳಿಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಅಡಗಿರುವುದು ಗೊತ್ತಾಯಿತು. ಐಟಿಬಿಪಿ ಬೆಟಾಲಿಯನ್ನ ರಕ್ಷಣಾ ಸಿಬ್ಬಂದಿ ಸಹಕಾರದೊಂದಿಗೆ ಮೂವರನ್ನು ಸೆರೆಹಿಡಿದಿದ್ದೇವೆ’ ಎಂದು ಕೊಂಡ್ಗಾಂವ್ನ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಮಹೇಶ್ವರ ನಾಗ್ ತಿಳಿಸಿದ್ದಾರೆ.

‘ಬಂಧಿತರನ್ನು ಲಕ್ಷ್ಮಿನಾಥ್ ಕೊರ್ರಮ್(28), ಚಂದನ್ ಕೊರ್ರಮ್ (19) ಮತ್ತು ಜೈತ್ರಮ್ ಕೋರಮ್(21) ಎಂದು ಗುರುತಿಸಲಾಗಿದೆ. ಅವರಿಂದ 10 ಕೆ.ಜೆ. ಭಾರದ ಟಿಫಿನ್ ಬಾಂಬ್, ಒಂದು ಬಂಡಲ್ ವೈರ್, ಬ್ಯಾಟರಿ, ಮಾವೋವಾದ ಪರವಾದ ಕರಪತ್ರಗಳು ಮತ್ತು ಬ್ಯಾನರ್ಗಳನ್ನು ವಶಪಡಿಸಿಕೊಂಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

‘ಸ್ಫೋಟಕದಿಂದ ಭದ್ರತಾ ಸಿಬ್ಬಂದಿಗೆ ಹಾನಿ ಮಾಡುಬೇಕೆಂದು ಕೊಂಡಿದ್ದೆವು ಎಂದು ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಅವರ ಮೇಲೆ ಸ್ಫೋಟಕ ಸಾಮಗ್ರಿ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆ(ತಡೆ) ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ’ ಎಂದು ಮಹೇಶ್ವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.