ಮಂಗಳವಾರ, ಆಗಸ್ಟ್ 4, 2020
22 °C

ಅಫ್ಘಾನಿಸ್ತಾನ: ವಾಯುದಾಳಿಯಲ್ಲಿ 14 ಐಎಸ್‌ ಉಗ್ರರ ಹತ್ಯೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಅಫ್ಘಾನಿಸ್ತಾನ: ವಾಯುದಾಳಿಯಲ್ಲಿ 14 ಐಎಸ್‌ ಉಗ್ರರ ಹತ್ಯೆ

ಕಾಬೂಲ್: ಅಫ್ಘಾನಿಸ್ತಾನದ ಲಗ್‌ಮ್ಯಾನ್ ವಲಯದಲ್ಲಿ ಶುಕ್ರವಾರ ರಾತ್ರಿ ನಡೆದ ವಾಯುದಾಳಿಯಲ್ಲಿ 14 ಮಂದಿ ಐಎಸ್ ಭಯೋತ್ಪಾದಕರು ಹತ್ಯೆಯಾಗಿದ್ದಾರೆ.

ಅಲಿಘರ್ ಜಿಲ್ಲೆಯ ಕೊಂಡ್ಗಲ್ ವಲಯದಲ್ಲಿ ಶುಕ್ರವಾರ ರಾತ್ರಿ ವಾಯುದಾಳಿ ನಡೆಸಲಾಗಿತ್ತು ಎಂದು ಲಗ್‌ಮ್ಯಾನ್ ವಲಯದ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

‘ಈ ದಾಳಿಯಲ್ಲಿ ಇಬ್ಬರು ಐಎಸ್ ಕಮಾಂಡರ್ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆ ಬಗ್ಗೆ ಐಎಸ್ ಉಗ್ರ ಸಂಘಟನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.

ಗುರುವಾರ ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 20 ಮಂದಿ ಸಾವಿಗೀಡಾಗಿದ್ದು, 30 ಮಂದಿಗೆ ಗಾಯವಾಗಿದೆ. ಇದರ ಹೊಣೆಯನ್ನು ಐಎಸ್‌ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಆತ್ಮಾಹುತಿ ಬಾಂಬ್ ದಾಳಿಕೋರ ನಗರದ ಬಾನಾಯಿ ಏರಿಯಾದಲ್ಲಿ ಕಾರ್ಯನಿರತರಾಗಿದ್ದ ಪೊಲೀಸ್ ಹಾಗೂ ತನಿಖಾ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದ. ಈಗಾಗಲೇ ಕಾಬೂಲ್ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.