ಸಿಮೊನ್ಸ್‌ಗೆ ಪ್ರಶಸ್ತಿ

7

ಸಿಮೊನ್ಸ್‌ಗೆ ಪ್ರಶಸ್ತಿ

Published:
Updated:
ಸಿಮೊನ್ಸ್‌ಗೆ ಪ್ರಶಸ್ತಿ

ಪುಣೆ: ಫ್ರಾನ್ಸ್‌ನ ಆಟಗಾರ ಗಿಲ್ಲೆಸ್‌ ಸಿಮೊನ್ಸ್ ಅವರು ಶನಿವಾರ ಟಾಟಾ ಓಪನ್‌ ಮಹಾರಾಷ್ಟ್ರ ಟ್ರೋಫಿ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 89ನೇ ಸ್ಥಾನದಲ್ಲಿರುವ ಶ್ರೇಯಾಂಕರಹಿತ ಆಟಗಾರ ಸಿಮೊನ್ಸ್‌ 7–6, 6–2ರಲ್ಲಿ 14ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್‌ಗೆ ಆಘಾತ ನೀಡಿದ್ದಾರೆ.

ಫೈನಲ್ ತಲುಪುವ ಹಾದಿಯಲ್ಲಿ ಸಿಮೊನ್ಸ್ ಅವರು ಆರನೇ ರ‍್ಯಾಂಕಿಂಗ್ ಸ್ಥಾನದಲ್ಲಿರುವ ಮರಿನ್ ಸಿಲಿಕ್‌ ಹಾಗೂ ಮೂರನೇ ಶ್ರೇಯಾಂಕದ ರೋಬರ್ಟೊ ಅಗಸ್ಟ್ ಅವರಿಗೂ ಸೋಲುಣಿಸಿದ್ದರು.

2015ರ ಬಳಿಕ ಸಿಮೊನ್ಸ್‌ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ. ಮೊದಲ ಸೆಟ್‌ನಲ್ಲಿ ಆ್ಯಂಡರ್ಸನ್‌ ಅವರಿಂದ ತೀವ್ರ ಪೈಪೋಟಿ ಎದುರಿಸಿದ ಸಿಮೊನ್ಸ್‌ ಟೈ ಬ್ರೇಕರ್‌ನಲ್ಲಿ ಗೆಲುವು ಪಡೆದರು. ಆದರೆ ಎರಡನೇ ಸೆಟ್‌ನಲ್ಲಿ ಸಿಮೊನ್ಸ್ ಪ್ರಾಬಲ್ಯ ಮೆರೆದರು. ಆರಂಭದಿಂದಲೇ ಆಂಡರ್ಸನ್‌ ಅನಗತ್ಯ ತಪ್ಪುಗಳಿಂದ ಪಾಯಿಂಟ್ಸ್ ಬಿಟ್ಟುಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry