ಬುಧವಾರ, ಆಗಸ್ಟ್ 5, 2020
21 °C

‘ನಾಸಾ’ದಿಂದ ಮುಂದಿನ ತಲೆಮಾರಿನ ರೋಬೊ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

‘ನಾಸಾ’ದಿಂದ ಮುಂದಿನ ತಲೆಮಾರಿನ ರೋಬೊ

ವಾಷಿಂಗ್ಟನ್: ಅಮೆರಿಕದ ರಕ್ಷಣಾ ಸಂಶೋಧನಾ ಸಂಸ್ಥೆ ಹಾಗೂ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಜೊತೆಗೂಡಿ ಮುಂದಿನ ತಲೆಮಾರಿನ ರೋಬೊಗಳ ತಯಾರಿಕೆ ಆರಂಭಿಸಿವೆ. ಈ ರೋಬೊಗಳು, ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ಮರುಭರ್ತಿ ಹಾಗೂ ದುರಸ್ತಿ ಮಾಡುವುದರ ಜೊತೆಗೆ ಬಾಹ್ಯಾಕಾಶ ಯುದ್ಧದ ಸಂದರ್ಭದಲ್ಲಿ ವೈರಿ ಉಪಗ್ರಹಗಳನ್ನು ಧ್ವಂಸಗೊಳಿಸಲೂ ಸಶಕ್ತವಾಗಿರಲಿವೆ.

‘ಕಕ್ಷೆಯಲ್ಲಿನ ಸೇವಾ ಕೇಂದ್ರಗಳು’ ಎಂದೂ ಕರೆಸಿಕೊಳ್ಳಲಿರುವ ಈ ರೋಬೊಗಳು, ಉಪಗ್ರಹಗಳ ಆಯಸ್ಸನ್ನು ಗಣನೀಯವಾಗಿ ವೃದ್ಧಿಸುತ್ತವೆ. ಉಪಗ್ರಹಗಳ ಸಣ್ಣಪುಟ್ಟ ನಿರ್ವಹಣಾ ಸಮಸ್ಯೆಗಳನ್ನೂ ಸರಿಪಡಿಸಬಲ್ಲವು. ಬಾಹ್ಯಾಕಾಶದಲ್ಲಿ ಕೆಟ್ಟುನಿಂತ ಉಪಗ್ರಹಗಳನ್ನು ದುರಸ್ತಿ ಮಾಡುವುದು ತುಂಬಾ ಕ್ಲಿಷ್ಟಕರ ಹಾಗೂ ದುಬಾರಿ ಕೂಡಾ.

‘ಹೊಸ ತಲೆಮಾರಿನ ರೋಬೊಗಳು ವೈರಿ ಉಪಗ್ರಹಗಳನ್ನು ಪತನಗೊಳಿಸುತ್ತವೆ’ ಎಂದು ‘ಫ್ಯೂಚರಿಸಂ’ ವರದಿ ಮಾಡಿದೆ. ಇವು ಬಾಹ್ಯಾಕಾಶದಲ್ಲಿರುವ ತ್ಯಾಜ್ಯ ವಿಲೇವಾರಿಗೂ ನೆರವಾಗುತ್ತೆ. 2015ರಲ್ಲಿ ಮಾನವ ನಿರ್ಮಿತ 25 ಸಾವಿರ ವಸ್ತುಗಳು ಬಾಹ್ಯಾಕಾಶದಲ್ಲಿವೆ ಎಂದು ವರದಿಯಾಗಿತ್ತು. ಈ ತ್ಯಾಜ್ಯ ವಸ್ತುಗಳು ವೇಗವಾಗಿ ತಿರುಗುತ್ತಿರುವುದರಿಂದ ಉಪಗ್ರಹಗಳಿಗೆ ಅಪಾಯ ತಂದೊಡ್ಡುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.