ಜೋಯ್‌ ಅಲುಕ್ಕಾಸ್‌ ಎರಡು ನೂತನ ಮಳಿಗೆ ಆರಂಭ

7

ಜೋಯ್‌ ಅಲುಕ್ಕಾಸ್‌ ಎರಡು ನೂತನ ಮಳಿಗೆ ಆರಂಭ

Published:
Updated:
ಜೋಯ್‌ ಅಲುಕ್ಕಾಸ್‌ ಎರಡು ನೂತನ ಮಳಿಗೆ ಆರಂಭ

ಬೆಂಗಳೂರು: ನಗರದ ಆಭರಣ ಪ್ರಿಯರಿಗೆ ಹೊಸ ವರ್ಷದ ಕೊಡುಗೆಯಾಗಿ ಜೋಯ್‌ ಅಲುಕ್ಕಾಸ್‌ ಎರಡು ಹೊಸ ಮಳಿಗೆಗಳನ್ನು ಪ್ರಾರಂಭಿಸಿದೆ.

ಮಹದೇವಪುರದ ಫೀನಿಕ್ಸ್ ಮಾರ್ಕೆಟ್ ಸಿಟಿ ಮತ್ತು ಮಾರತ್ತಹಳ್ಳಿ ಯಲ್ಲಿ ಈ ಮಳಿಗೆಗಳು ಆರಂಭವಾಗಿವೆ.

‘ಬೆಂಗಳೂರು ಅತ್ಯಂತ ಪ್ರಮುಖ ವ್ಯಾಪಾರಿ ತಾಣವಾಗಿದೆ. ನಗರವಾಸಿಗಳ ಅಭಿರುಚಿಗೆ ತಕ್ಕಂತಹ ಆಭರಣಗಳು ನಮ್ಮಲ್ಲಿವೆ. ಸಾಂಪ್ರದಾಯಿಕ, ಸಮಕಾಲಿನ ಮತ್ತು ಅಂತರಾಷ್ಟ್ರೀಯ ವಿನ್ಯಾಸದ ಆಭರಣಗಳು ಗ್ರಾಹಕರನ್ನು ಸೆಳೆಯಲಿವೆ’ ಎಂದು ಜೋಯ್‌ ಅಲುಕ್ಕಾಸ್‌ ಸಂಸ್ಥೆ ಅಧ್ಯಕ್ಷ ಜೋಯ್‌ ಅಲುಕ್ಕಾಸ್‌ ತಿಳಿಸಿದರು.

ಮಾರತ್ತಹಳ್ಳಿ ಮಳಿಗೆಯನ್ನು ಶಾಸಕ ಅರವಿಂದ ಲಿಂಬಾವಳಿ ಹಾಗು ಪಾಲಿಕೆ ಸದಸ್ಯ ರಮೇಶ್ ಉದ್ಘಾಟಿಸಿದರೆ, ಫಿನೀಕ್ಸ್ ಮಾರ್ಕೆಟ್ ಸಿಟಿಯಲ್ಲಿನ ಮಳಿಗೆಗೆ ಐಜಿಪಿ ಡಿ.ರೂಪಾ ಚಾಲನೆ ನೀಡಿದರು.

ಐಜಿಪಿ ಡಿ.ರೂಪಾ, ‘ಎಲ್ಲಾ ಮಹಿಳೆಯರಿಗೂ ಅಭರಣಗಳೆಂದರೆ ಅಚ್ಚುಮೆಚ್ಚು. ವಿಭಿನ್ನ ವಿನ್ಯಾಸ ಆಭರಣಗಳು ಇಲ್ಲಿ ದೊರೆಯುವುದರಿಂದ ಮಹಿಳೆಯರ ನೆಚ್ಚಿನ ಅಭರಣ ಮಳಿಗೆ ಇದಾಗುವುದರಲ್ಲಿ ಆಶ್ಚರ್ಯವಿಲ್ಲ’ ಎಂದು ಹೇಳಿದರು.

ಜೋಯ್‌ ಅಲುಕ್ಕಾಸ್‌ನಲ್ಲಿ ಟೆಂಪಲ್ ಆಭರಣ, ಪ್ರೈಡ್ ಡೈಮಂಡ್‌ಗಳು, ಝೆನಿನಾ ಟರ್ಕಿಸ್ ಆಭರಣ, ಲಿಟಲ್ ಜಾಯ್ ಕಿಡ್ ಆಭರಣ, ಅಪೂರ್ವ ಆಂಟಿಕ್ ಸಂಗ್ರಹಗಳು ಸೇರಿ ಚಿನ್ನ, ವಜ್ರ, ಪ್ಲಾಟಿನಂ ಮತ್ತು ಮುತ್ತಿನ ಆಭರಣಗಳು ಇಲ್ಲಿ ದೊರೆಯುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry