ಅರ್ಧ ಹೆಲ್ಮೆಟ್ ಧರಿಸದಂತೆ ಪೊಲೀಸರಿಗೂ ಸೂಚನೆ

7

ಅರ್ಧ ಹೆಲ್ಮೆಟ್ ಧರಿಸದಂತೆ ಪೊಲೀಸರಿಗೂ ಸೂಚನೆ

Published:
Updated:
ಅರ್ಧ ಹೆಲ್ಮೆಟ್ ಧರಿಸದಂತೆ ಪೊಲೀಸರಿಗೂ ಸೂಚನೆ

ಬೆಂಗಳೂರು:‌  ನಗರದ ಸಂಚಾರ ಪೊಲೀಸರು, ‘ಆಪರೇಷನ್ ಸೇಫ್‌ ರೈಡ್‌’ ಹೆಸರಿನ ಕಾರ್ಯಾಚರಣೆಯನ್ನು ಫೆ. 1ರಿಂದ ಆರಂಭಿಸಲಿದ್ದಾರೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಇಲಾಖೆಯು ಅರ್ಧ ಹೆಲ್ಮೆಟ್‌ ಧರಿಸದಂತೆ ಪೊಲೀಸರಿಗೂ ಸೂಚನೆ ನೀಡಿದೆ.

ಐಎಸ್‌ಐ ಮತ್ತು ಬಿಐಎಸ್‌ ಮುದ್ರೆ ಹೊಂದಿರದ ಹಾಗೂ ಅರ್ಧ ಹೆಲ್ಮೆಟ್ ಧರಿಸುವ ಬೈಕ್ ಸವಾರರಿಗೆ ಮೈಸೂರಿನಲ್ಲಿ ಈಗಾಗಲೇ ದಂಡ ವಿಧಿಸಲಾಗುತ್ತಿದೆ. ನಗರದಲ್ಲೂ ಪೊಲೀಸರು ಈ ಬಗ್ಗೆ ವಿಶೇಷ  ಅಭಿಯಾನ ನಡೆಸಲಿದ್ದಾರೆ. ಬಹುತೇಕ ಪೊಲೀಸ್‌ ಸಿಬ್ಬಂದಿ ಇಂಥ ಅರ್ಧ ಹೆಲ್ಮೆಟ್‌ಗಳನ್ನು ಧರಿಸುತ್ತಿದ್ದಾರೆ. ಹಾಗಾಗಿ ‌ಅವರಿಗೆ ಮೊದಲಿಗೆ ಎಚ್ಚರಿಕೆ ನೀಡಲಾಗಿದೆ. ಇಲಾಖೆ ಹಾಗೂ ವೈಯಕ್ತಿಕ ದ್ವಿಚಕ್ರ ವಾಹನಗಳ ಚಾಲನೆ ವೇಳೆ ಕಳಪೆ ಗುಣಮಟ್ಟದ ಹೆಲ್ಮೆಟ್‌ ಬಳಸದಂತೆ ತಿಳಿಸಲಾಗಿದೆ.

‘ಸಿಬ್ಬಂದಿಗೆ ಇಲಾಖೆಯಿಂದ ಯಾವುದೇ ಹೆಲ್ಮೆಟ್‌ ನೀಡುತ್ತಿಲ್ಲ. ಪೊಲೀಸರೇ ಅವುಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ಹೀಗಾಗಿ ಐಎಸ್‌ಐ ಮತ್ತು ಬಿಐಎಸ್‌ ಮುದ್ರೆ ಇರುವ ಹೆಲ್ಮೆಟ್‌ ಮಾತ್ರ ಧರಿಸುವಂತೆ ನಮ್ಮ ಸಿಬ್ಬಂದಿಗೂ ಸೂಚಿಸಿದ್ದೇವೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ ತಿಳಿಸಿದರು.

‘ನಿಯಮವನ್ನು ಪೊಲೀಸರು ಮೊದಲು ಪಾಲಿಸಬೇಕು. ಅವರು ಹೆಲ್ಮೆಟ್‌ ಧರಿಸದೆ ಬೈಕ್‌ ಓಡಿಸುತ್ತಾರೆಯೇ ಎಂಬ ಬಗ್ಗೆಯೂ ಪರಿಶೀಲಿಸಲಿದ್ದೇವೆ. ನಿಯಮ ಉಲ್ಲಂಘಿಸಿದ್ದು ಕಂಡು ಬಂದರೆ, ಅವರಿಗೆ ಮೊದಲು ದಂಡ ವಿಧಿಸಲಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry